ತುಪ್ಪ ಅಸಲಿಯೋ ನಕಲಿಯೋ 5 ನಿಮಿಷದಲ್ಲಿ ಕಂಡುಹಿಡಿಯಲು ಇಲ್ಲಿದೆ ಟಿಪ್ಸ್ 

By Reshma
Sep 24, 2024

Hindustan Times
Kannada

ಕಳೆದೊಂದು ವಾರದಿಂದ ತಿರುಪತಿ ದೇವಾಲಯದ ಲಡ್ಡು ಪ್ರಸಾದದ್ದೇ ಸುದ್ದಿ. ಇಲ್ಲಿನ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಸೇರಿಸಲಾಗುತ್ತದೆ ಎಂಬ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ 

ತಿರುಪತಿ ಲಡ್ಡು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಕಲಬೆರಕೆ ತುಪ್ಪ ಬಳಸಿರುವುದು ಸಾಬೀತಾಗಿದೆ 

ತುಪ್ಪದ ವಿಚಾರಕ್ಕೆ ಸಂಬಂಧಿಸಿ ಆಗಾಗ ಕಲಬೆರಕೆ ತುಪ್ಪದ ವಿಚಾರ ಮುನ್ನಲೆಗೆ ಬರುತ್ತಲೇ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಭಾರತದ ತುಪ್ಪದ ಬೇಡಿಕೆ ಹೆಚ್ಚಿರುವ ಕಾರಣ ಕಲಬೆರಕೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ 

ಭಾರತದಲ್ಲಿ ಬಹುತೇಕ ಖಾದ್ಯಕ್ಕೆ ತುಪ್ಪ ಬಳಸಲಾಗುತ್ತದೆ. ತುಪ್ಪ ಬಳಕೆಯಿಂದ ಆಹಾರ ರುಚಿ ಹೆಚ್ಚಾಗುವುದು ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ 

ಆದರೆ ತುಪ್ಪದ ರುಚಿ ಹಾಗೂ ಸ್ವಾದ ಹೆಚ್ಚಬೇಕು ಎಂದರೆ ಅದು ಅಸಲಿ ಆಗಿರುವುದು ಬಹಳ ಮುಖ್ಯ. ಹಾಗಾದರೆ ಅಸಲಿ ತುಪ್ಪವನ್ನು ಗುರುತಿಸುವುದು ಹೇಗೆ?

ತುಪ್ಪ ಖರೀದಿಸುವಾಗ ಅದರ ಪರಿಮಳ ಗಮನಿಸಿ. ಶುದ್ಧ ತುಪ್ಪವು ಹಳದಿ ಹಣ್ಣದಲ್ಲಿ ಪರಿಮಳದಿಂದ ಕೂಡಿರುತ್ತದೆ

ಬಿಳಿ ಕಾಗದದ ಮೇಲೆ ಸ್ವಲ್ಪ ತುಪ್ಪ ಹರಡಿ. ಸ್ವಲ್ಪ ಸಮಯ ಬಿಟ್ಟು ಕಾಗದವನ್ನು ಪರಿಶೀಲಿಸಿ. ತುಪ್ಪ ಕಲಬೆರಕೆ ಆಗಿದ್ದರೆ ಕಾಗದದ ಮೇಲೆ ಕಪ್ಪು ಕಲೆಗಳು ಕಾಣಿಸುತ್ತವೆ. ಆದರೆ ಶುದ್ಧ ತುಪ್ಪ ಹಾಗಾಗುವುದಿಲ್ಲ 

ತುಪ್ಪ ಕಲಬೆರಕೆ ಆಗಿದ್ದರೆ ಕೋಣೆಯ ಉಷ್ಣಾಂಶದಲ್ಲೂ ಗಟ್ಟಿಯಾಗುತ್ತದೆ. ಆದರೆ ಶುದ್ಧ ತುಪ್ಪ ಫ್ರಿಜ್‌ನಲ್ಲಿ ಇಟ್ಟರೆ ಮಾತ್ರ ಗಟ್ಟಿಯಾಗುತ್ತದೆ 

ಶುದ್ಧ ತುಪ್ಪ ಬೆಂಕಿಯಲ್ಲಿ ಕರಗಿಸಿದಾಗ ಸುಮಧುರ ಪರಿಮಳ ಬರುತ್ತದೆ. ಆದರೆ ಕಲಬೆರಕೆ ಆಗಿದ್ದರೆ ಪರಿಮಳ ಇಲ್ಲದಿರಬಹುದು, ಕೆಲವೊಮ್ಮೆ ವಿಚಿತ್ರ ವಾಸನೆ ಬರಬಹುದು 

ಶುದ್ಧ ತುಪ್ಪ ಕೈಯಲ್ಲಿ ಹಿಡಿದ ತಕ್ಷಣ ಕರಗುತ್ತದೆ. ಆದರೆ ಕಲಬೆರಕೆ ತುಪ್ಪ ಕೈಯಲ್ಲಿ ಇಟ್ಟರೆ ಕರಗುವುದಿಲ್ಲ 

ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು