ಮನೆಯಲ್ಲೇ ಈ ರೀತಿ ಪನೀರ್ ತಯಾರಿಸಿ

Pinterest

By Priyanka Gowda
Feb 03, 2025

Hindustan Times
Kannada

ಪದಾರ್ಥಗಳಿಗೆ ಕಲಬೆರಕೆ ಮಾಡುವುದರಿಂದ ಜನರು ಮಾರುಕಟ್ಟೆಯಿಂದ ಏನೇ ವಸ್ತು ಖರೀದಿಸಲು ಯೋಚಿಸುವಂತಾಗಿದೆ. ಪನೀರ್ ಖರೀದಿಸಲು ಕೂಡ ಭಯಪಡುವಂತಾಗಿದೆ. ಹೀಗಾಗಿ ಮನೆಯಲ್ಲೇ ಇದನ್ನು ತಯಾರಿಸುವ ಸರಳ ವಿಧಾನ ಇಲ್ಲಿದೆ.

Pinterest

ಒಲೆಯನ್ನು ಮಧ್ಯಮ ಉರಿಯಲ್ಲಿಟ್ಟು ಹಾಲನ್ನು ಕುದಿಸಿ. ಇದನ್ನು ಬಹಳ ಹೊತ್ತು ಕುದಿಸಬೇಕು.

Pinterest

ಮನೆಯಲ್ಲೇ ಪನೀರ್ ತಯಾರಿಸಲು ಹೆಚ್ಚು ಕೊಬ್ಬಿನಂಶವಿರುವ ಹಾಲನ್ನು ಬಳಸಿ. ಇದರಿಂದ ಮೃದುವಾದ ಪನೀರ್ ತಯಾರಿಸಲು ಸಾಧ್ಯ.

Pinterest

ನಂತರ ಇದಕ್ಕೆ ನಿಂಬೆರಸ ಅಥವಾ ವಿನೆಗರ್ ಬೆರೆಸಿ. ಮೊಸರನ್ನೂ ಕೂಡ ಬೆರೆಸಬಹುದು. ಇದರಿಂದ ಹಾಲು ಒಡೆಯುತ್ತದೆ. ಕೂಡಲೇ ಒಲೆ ಆಫ್ ಮಾಡಿ. ನಂತರ ಇದನ್ನು ಬಟ್ಟೆಯೊಂದರಲ್ಲಿ ಸೋಸಿ.

Pinterest

ಬಟ್ಟೆಗೆ ಸೋಸಿದ ನಂತರ ಇದನ್ನು ನಿಧಾನವಾಗಿ ಒತ್ತಿರಿ. ನಿಂಬೆರಸ, ವಿನೆಗರ್ ಅಥವಾ ಮೊಸರು ಬೆರೆಸಿರುವುದರಿಂದ ಇದು ಹುಳಿ ರುಚಿ ಹೊಂದಿರುತ್ತದೆ.

Pinterest

ಈ ಹುಳಿ ರುಚಿಯನ್ನು ಹೋಗಲಾಡಿಸಲು ಎರಡರಿಂದ ಮೂರು ಬಾರಿ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.

Pinterest

ಇದರಲ್ಲಿನ ನೀರು ಆವಿಯಾಗಲು ಬಟ್ಟೆಯನ್ನು ಗಟ್ಟಿಯಾಗಿ ಹಿಂಡಿ.

Pinterest

ಸಂಪೂರ್ಣ ನೀರು ಆವಿಯಾಗಲು ಕನಿಷ್ಠ 30 ನಿಮಿಷಗಳ ಕಾಲ ಇದರ ಮೇಲೆ ಯಾವುದಾದರೂ ಭಾರವಾದ ವಸ್ತುವನ್ನಿಡಿ.

Pinterest

ಬಳಕೆಗೆ ಸಿದ್ಧವಾದ ನಂತರ, ಪನೀರ್ ಅನ್ನು ಒಂದು ಗಂಟೆಯವರೆಗೆ ಫ್ರಿಜ್‌ನಲ್ಲಿರಿಸಿ. ಇಷ್ಟೇ, ಪನೀರ್ ಸಿದ್ಧ.

Pinterest

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು