ಆಮ್ಲಾವನ್ನು ದೀರ್ಘಕಾಲದವರೆಗೆ ಈ ರೀತಿ ಸಂಗ್ರಹಿಸಿ ಇಡಬಹುದು

By Rakshitha Sowmya
Jan 28, 2025

Hindustan Times
Kannada

ಆಮ್ಲಾ ಬಹೋಪಯೋಗಿಯಾಗಿದ್ದು ಇದನ್ನು ಸೂಕ್ತ ವಿಧಾನದಲ್ಲಿ ತಿಂಗಳುಗಟ್ಟಲೆ ಸಂಗ್ರಹಿಸಿಡಬಹುದು

ಆಮ್ಲಾವನ್ನು ಸಣ್ಣಗೆ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ನಂತರ ಗಾಳಿ ಆಡದ ಡಬ್ಬದಲ್ಲಿ ಶೇಖರಿಸಿ ಇಡಬಹುದು

ನೆಲ್ಲಿಕಾಯನ್ನು ಸಕ್ಕರೆ ಪಾಕದಲ್ಲಿ ಬೇಯಿಸಿ ಆಮ್ಲಾ ಮುರಬ್ಬಾ ತಯಾರಿಸಿ, ತಣ್ಣಗಾದ ನಂತರ ಗಾಜಿನ ಜಾಡಿಯಲ್ಲಿ ಸಂಗ್ರಹಿಸಿ ಇಡಬಹುದು

ಆಮ್ಲಾವನ್ನು ಒಣಗಿಸಿ ಪುಡಿ ಮಾಡಿ ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ ಬೇಕಾದಾಗ ಬಳಸಿಕೊಳ್ಳಬಹುದು

ನೆಲ್ಲಿಕಾಯಿ ಉಪ್ಪಿನಕಾಯಿ ತಯಾರಿಸಿ ಕೂಡಾ ಆಮ್ಲಾವನ್ನು ಬಹಳ ದಿನಗಳ ಕಾಲ ಇಡಬಹುದು

ನೆಲ್ಲಿಕಾಯನ್ನು ಫ್ರೀಜ್‌ ಮಾಡಿ ಅದನ್ನು ಒಂದು ಜಿಪ್‌ ಕವರ್‌ ಅಥವಾ ಡಬ್ಬಿಯಲ್ಲಿ ಇಟ್ಟರೂ ದೀರ್ಘ ಕಾಲ ಇಡಬಹುದು

ಆಮ್ಲಾ ಜ್ಯೂಸ್‌ ತಯಾರಿಸಿ ಅದನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೆ ಹೆಚ್ಚು ದಿನ ಇಡಬಹುದು

ನೆಲ್ಲಿಕಾಯಿ ತುಂಡುಗಳನ್ನು ಮಾಡಿ ಸಕ್ಕರೆಯಲ್ಲಿ ನೆನೆಸಿ ಒಣಗಿಸಿ, ಈ ಕ್ಯಾಂಡಿಯನ್ನು ಬಹಳ ದಿನಗಳ ಕಾಲ ಶೇಖರಿಸಿ ಇಡಬಹುದು

ಆಮ್ಲಾವನ್ನು ಎಣ್ಣೆಯೊಂದಿಗೆ ರುಬ್ಬಿ ಕುದಿಸಿ, ಶೋಧಿಸಿ ಆ ಎಣ್ಣೆಯನ್ನು ಕೂಡಾ ಹೆಚ್ಚು ದಿನ ಬಳಸಬಹುದು, ಇದು ಕೂದಲಿಗೆ ಒಳ್ಳೆಯದು

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ