ಬೇಸಿಗೆಯಲ್ಲಿ ಪುದಿನಾ, ಕೊತ್ತಂಬರಿ ಸೊಪ್ಪು ಬಾಡದಂತೆ ತಾಜಾವಾಗಿರಿಸಲು ಇಲ್ಲಿದೆ ಟಿಪ್ಸ್
By Reshma May 14, 2025
Hindustan Times Kannada
ಬಿಸಿಲಿನ ಝಳ ಹೆಚ್ಚಿರುವ ಕಾರಣ ಕೊತ್ತಂಬರಿ ಹಾಗೂ ಪುದಿನಾ ಸೊಪ್ಪು ಬಹಳ ಬೇಗ ಬಾಡಿ ಹೋಗಬಹುದು, ಆದರೆ ಈ ಕೆಲವು ಟಿಪ್ಸ್ ಪಾಲಿಸಿದ್ರೆ ಇವುಗಳನ್ನು ತಾಜಾವಾಗಿ ಇರಿಸಬಹುದು
ಪುದಿನಾ ಹಾಗೂ ಕೊತ್ತಂಬರಿ ಸೊಪ್ಪಿನ ಬೇರು ಕತ್ತರಿಸಿ. ಒಂದು ಲೋಟದಲ್ಲಿ ಅರ್ಧದಷ್ಟು ನೀರು ಹಾಕಿ ಅದರಲ್ಲಿ ಕಾಂಡ ಮುಳುಗುವಂತೆ ಇರಿಸಿ, ಸೊಪ್ಪು ಲೋಟದ ಮೇಲ್ಭಾಗದಲ್ಲಿ ಇರಬೇಕು. ಇದಕ್ಕೆ ಒಂದು ಪ್ಲಾಸ್ಟಿಕ್ ಕವರ್ ಮುಚ್ಚಿ ಫ್ರಿಜ್‌ನಲ್ಲಿರಿಸಿ
ಕೊತ್ತಂಬರಿ, ಪುದಿನಾ ಸೊಪ್ಪನ್ನು ಚೆನ್ನಾಗಿ ತೊಳೆದು ಒಣಗಿಸಿ ನಂತರ ಒದ್ದೆ ಇರುವ ಹತ್ತಿ ಬಟ್ಟೆಯಲ್ಲಿ ಸುತ್ತಿ, ಇದನ್ನು ಜಿಪ್‌ಲಾಕ್ ಬ್ಯಾಗ್ ಅಥವಾ ಕವರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ
ಕೊತ್ತಂಬರಿ, ಪುದಿನಾ ಸೊಪ್ಪನ್ನು ಚೆನ್ನಾಗಿ ತೊಳೆದು ಒಣಗಿಸಿ. ಅವುಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ, ಜಿಪ್‌ಲಾಕ್ ಬ್ಯಾಗ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ. ಹೀಗೆ ಇರಿಸುವುದರಿಂದ ಕೊತ್ತಂಬರಿ, ಪುದಿನಾ ಸೊಪ್ಪು 10 ರಿಂದ 12 ದಿನ ತಾಜಾವಾಗಿರುತ್ತದೆ
ಪುದಿನಾ, ಕೊತ್ತಂಬರಿ ಸೊಪ್ಪನ್ನು ತೊಳೆದು ಚಿಕ್ಕದಾಗಿ ಕತ್ತರಿಸಿ ನುಣ್ಣಗೆ ಪ್ಯೂರಿ ಮಾಡಿ. ಐಸ್ ಕ್ಯೂಬ್ ಟ್ರೇಗಳಲ್ಲಿ ನೀರು ಅಥವಾ ಆಲಿವ್ ಎಣ್ಣೆ ಸೇರಿಸಿ ಫ್ರಿಜರ್‌ನಲ್ಲಿಡಿ. ಇದನ್ನು ಅಗತ್ಯವಿದ್ದಾಗ ಬಳಸಬಹುದು
ಈ ಸೊಪ್ಪುಗಳನ್ನು ಹಣ್ಣುಗಳ ಜೊತೆ ಇಡಬೇಡಿ. ಹಣ್ಣುಗಳಿಂದ ಹೊರ ಸೂಸುವ ಅನಿಲವು ಸೊಪ್ಪು ಬೇಗ ಹಾಳಾಗುವಂತೆ ಮಾಡುತ್ತದೆ
ಹಳದಿ ಬಣ್ಣಕ್ಕೆ ತಿರುಗಿದ, ಬಾಡಿದ ಎಲೆಗಳನ್ನು ಖರೀದಿಸಬೇಡಿ. ತಾಜಾ ಹಸಿರು ಎಲೆಗಳನ್ನು ಮಾತ್ರ ಖರೀದಿಸಿ. ಆದರೆ ಜಾಸ್ತಿ ಪ್ರಮಾಣದಲ್ಲಿ ಖರೀದಿಸಬೇಡಿ. ಸ್ವಲ್ಪ ಮಾತ್ರ ಖರೀದಿಸಿ
ನೀವು ಕೊತ್ತಂಬರಿ, ಪುದಿನಾ ಸೊಪ್ಪನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದರೆ ಅವುಗಳನ್ನು ಚೆನ್ನಾಗಿ ತೊಳೆದು ಗಾಳಿಯಾಡದ ಜಾರ್‌ನಲ್ಲಿ ಸಂಗ್ರಹಿಸಿ ಇಡಿ
ಬೇಸಿಗೆಯಲ್ಲಿ ವಿಶೇಷವಾಗಿ ಫ್ರಿಜ್‌ನಲ್ಲಿಡುವ ಮೊದಲು ಹೊರಗಡೆ ಹೆಚ್ಚು ಹೊತ್ತು ಇಡಬೇಡಿ, ಇದರಿಂದ ಬೇಗ ಬಾಡುವ ಸಾಧ್ಯತೆ ಇದೆ
ಸೊಪ್ಪುಗಳನ್ನು ತೊಳೆದ ನಂತರ ಚೆನ್ನಾಗಿ ಒಣಗಿಸಿ, ತೇವಾಂಶದಿಂದ ಅವು ಬೇಗನೆ ಹಾಳಾಗಬಹುದು