ಕುಟ್ಟು ದೋಸೆ ತಯಾರಿಸುವ ವಿಧಾನ

By Rakshitha Sowmya
Apr 14, 2024

Hindustan Times
Kannada

ಬಕ್‌ ವೀಟ್‌ನಿಂದ ತಯಾರಿಸಲಾಗುವ ಈ ದೋಸೆ ಆರೋಗ್ಯಕ್ಕೆ ಬಹಳ ಒಳ್ಳೆಯದು

ಬೇಕಾಗುವ ಸಾಮಗ್ರಿಗಳು ಬಕ್‌ ವ್ಹೀಟ್‌ - 4 ಟೇಬಲ್‌ ಸ್ಪೂನ್‌ ಬೇಯಿಸಿದ ಆಲೂಗಡ್ಡೆ - 2 ರಾಕ್‌ ಸಾಲ್ಟ್‌- ರುಚಿಗೆ ತಕ್ಕಷ್ಟು ತುಪ್ಪ - 1 ಟೇ ಸ್ಪೂನ್‌ ಕರಿಬೇವು - 1 ಎಸಳು ಹುರಿದ ಶೇಂಗಾ - 2 ಟೇ ಸ್ಪೂನ್‌ ಮ್ಯಾಂಗೋ ಪೌಡರ್‌ - 1 ಟೀ ಸ್ಪೂನ್‌ ಜೀರ್ಗೆ - 1 ಟೀ ಸ್ಪೂನ್‌ ಕೊತ್ತಂಬರಿ ಸೊಪ್ಪು - 1 ಹಿಡಿ ಹಸಿಮೆಣಸಿನಕಾಯಿ - 1 ಟೇ ಸ್ಪೂನ್‌ ನೀರು - 1/2 ಕಪ್‌

ಫಿಲ್ಲಿಂಗ್‌ ತಯಾರಿಸಲು ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರ್ಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಹುರಿದ ಶೇಂಗಾ ಸೇರಿಸಿ 

ಇದರ ಜೊತೆಗೆ ಬೇಯಿಸಿದ ಆಲೂಗಡ್ಡೆ, ರಾಕ್‌ ಸಾಲ್ಟ್‌, ಮ್ಯಾಂಗೋ ಪೌಡರ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್‌ ಮಾಡಿ

ಬಕ್‌ ವೀಟ್‌ ಹಿಟ್ಟಿಗೆ ಸ್ವಲ್ಪ ರಾಕ್‌ ಸಾಲ್ಟ್‌ , ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್‌ ಮಾಡಿ

ತವಾ ಮೇಲೆ ದೋಸೆ ಹೊಯ್ದು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸೇರಿಸಿ ಕಂದು ಬಣ್ಣ ಬರುವರೆಗೂ ಬೇಯಿಸಿ, ಫಿಲ್ಲಿಂಗನ್ನು ದೋಸೆ ಒಳಗೆ ಇಟ್ಟು ಸರ್ವ್‌ ಮಾಡಿ

ಕನ್ನಡಿಗರ ಮನಗೆದ್ದ ಕೆಎಸ್‌ ಅಶ್ವಥ್‌ ನೆನಪು ಸದಾ ಹಸಿರು