10 ವಿಧದ ಉಪ್ಪುಗಳು ಮತ್ತು ಪ್ರಯೋಜನ
By Jayaraj
Nov 28, 2024
Hindustan Times
Kannada
ಉಪ್ಪಿಗಿಂತ ರುಚಿ ಬೇರೆ ಯಾವುದೂ ಇಲ್ಲ. ನಿತ್ಯ ಅಡುಗೆಯಲ್ಲಿ ಬಳಕೆಯಾಗುವ ಉಪ್ಪಿನಲ್ಲೂ ಹಲವು ವಿಧಗಳಿವೆ. 10 ರೀತಿಯ ಉಪ್ಪು ಮತ್ತು ಅವುಗಳ ಪ್ರಯೋಜನ ಹೀಗಿವೆ.
ಸಂಸ್ಕರಿಸಿದ ಉಪ್ಪು (Table Salt): ಇದು ಎಲ್ಲೆಡೆ ಬಳಕೆಯಾಗುವ ಸಾಮಾನ್ಯ ಉಪ್ಪು. ಇದು ಮೆದುಳಿನ ಆರೋಗ್ಯಕ್ಕೆ ಅವಶ್ಯಕ.
ಸಮುದ್ರ ಉಪ್ಪು: ಸಮುದ್ರದ ನೀರಿನಿಂದ ಕೊಯ್ಲು ಮಾಡುವ ಸಮುದ್ರದ ಉಪ್ಪು, ಅಡುಗೆಯ ಸುವಾಸನೆ ಮತ್ತು ರುಚಿ ಹೆಚ್ಚಿಸುವ ಖನಿಜಗಳನ್ನು ಹೊಂದಿರುತ್ತದೆ.
ಹಿಮಾಲಯನ್ ಪಿಂಕ್ ಸಾಲ್ಟ್: ಪಾಕಿಸ್ತಾನದಲ್ಲಿ ಕೊಯ್ಲು ಮಾಡಿದ ಈ ಗುಲಾಬಿ ಬಣ್ಣದ ಉಪ್ಪಿನಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂಥ ಖನಿಜಗಳಿವೆ.
ಕೋಷರ್ ಉಪ್ಪು: ಮಾಂಸದ ಅಡುಗೆಗೆ ಬಳಸಲಾಗುತ್ತದೆ. ಇದರಲ್ಲಿ ಅಯೋಡಿನ್ ಇರುವುದಿಲ್ಲ.
ಬೊಲಿವಿಯನ್ ರೋಸ್ ಸಾಲ್ಟ್: ಈ ಗುಲಾಬಿ ಉಪ್ಪು ಕಬ್ಬಿಣದ ಅಂಶದಿಂದಾಗಿ ಈ ಬಣ್ಣ ಪಡೆಯುತ್ತದೆ. ಅಡುಗೆಗಳಿಗೆ ವಿಶಿಷ್ಟ ಪರಿಮಳ ಕೊಡುತ್ತದೆ.
ಕಪ್ಪು ಉಪ್ಪು: ಸಲ್ಫರಸ್ ಪರಿಮಳ ಇರುವ ಕಪ್ಪು ಉಪ್ಪನ್ನು ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ. ಔಷಧಗಳಲ್ಲಿ ಬಳಕೆ ಹೆಚ್ಚು.
Meta AI
ಗ್ರೇ ಸಾಲ್ಟ್: ಖನಿಜ ಸಮೃದ್ಧ ಉಪ್ಪನ್ನು ಫ್ರಾನ್ಸ್‌ನ ಬ್ರಿಟಾನಿಯಲ್ಲಿ ಕೊಯ್ಲು ಮಾಡಲಾಗುತ್ತದೆ. ಭಕ್ಷ್ಯಗಳನ್ನು ಬೇಯಿಸಲು ಬಳಸಲಾಗುತ್ತದೆ.
ಫ್ಲ್ಯೂರ್ ಡಿ ಸೆಲ್: ಕೈಯಿಂದ ಕೊಯ್ಲು ಮಾಡಿದ ಸಮುದ್ರದ ಉಪ್ಪು ಸೂಕ್ಷ್ಮ ಸುವಾಸನೆ ಹೊಂದಿರುತ್ತದೆ. ಸಿದ್ಧಪಡಿಸಿದ ಭಕ್ಷ್ಯಗಳ ಮೇಲೆ ಸಿಂಪಡಿಸಲು ಬಳಕೆಯಾಗುತ್ತದೆ.
ಕಡಿಮೆ ಸೋಡಿಯಂ ಉಪ್ಪು: ಅಧಿಕ ರಕ್ತದೊತ್ತಡ ಹೊಂದಿರುವ ಮಿತವಾಗಿ ಬಳಸಲು ಇರುವ ಉಪ್ಪು.
ಮಾಲ್ಡನ್ ಸಾಲ್ಟ್: ಇಂಗ್ಲೆಂಡ್‌ನಲ್ಲಿ ಹೆಚ್ಚು ಬಳಕೆ ಇರುವ ಈ ಉಪ್ಪು ಅಡುಗೆಗೆ ಕ್ರಂಚೀ ವಿನ್ಯಾಸ ಕೊಡುತ್ತದೆ.
Pexels and Pixabay
ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ