ಚಳಿಗಾಲದ ಪ್ರವಾಸಕ್ಕೆ ಭಾರತದ ಸೂಕ್ತ ಸ್ಥಳಗಳಿವು

By Jayaraj
Nov 13, 2024

Hindustan Times
Kannada

ನಿಮಗೆ ಚಳಿಯ ವಾತಾವರಣ ಇಷ್ಟವಾಗದಿದ್ದರೆ, ಮತ್ತು ಈ ಬಾರಿ ಚಳಿಗಾಲದಿಂದ ತಪ್ಪಿಸಿಕೊಳ್ಳಬೇಕೆಂದು ಬಯಸಿದರೆ ಭಾರತದಲ್ಲಿ ಕೆಲವೊಂದು ಅತ್ಯುತ್ತಮ ಸ್ಥಳಗಳಿವೆ.

ಈ ಸ್ಥಳಗಳಲ್ಲಿ ಚಳಿ ಕಡಿಮೆ. ಅಲ್ಲದೆ ಇಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಚಳಿಗಾಲವೇ ಅತ್ಯುತ್ತಮ ಸಮಯವಾಗಿದೆ.

ಗೋವಾ: ಪ್ರವಾಸಿಗರ ಸ್ವರ್ಗವಾಗಿರುವ ಗೋವಕ್ಕೆ ಭೇಟಿ ನೀಡಲು ಚಳಿಗಾಲ ಸೂಕ್ತ ಸಮಯ.

ಕೊಚ್ಚಿನ್‌, ಕೇರಳ: ಕೇರಳದಲ್ಲಿ ಹಲವಾರು ಬೀಚ್‌ಗಳಿವೆ. ಕೊಚ್ಚಿ ಸೇರಿದಂತೆ ದೇವರನಾಡು ಕೇರಳದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಚಳಿಗಾಲ ಸೂಕ್ತ ಸಮಯ.

ಮುಂಬೈ: ಬೇಸಿಗೆಯಲ್ಲಿ ಭಾರಿ ಸೆಕೆ ಇರುವ ಮುಂಬೈಗೆ ಭೇಟಿ ನೀಡಲು ಚಳಿಗಾಲ ಸೂಕ್ತ ಸಮಯ.

ಪುದುಚೇರಿ: ಫ್ರೆಂಚರ ವಸಾಹತುವಾಗಿದ್ದ ಪಾಂಡಿಚೇರಿ ಈಗಲೂ ಸುಂದರ ತಾಣಗಳನ್ನು ಹೊಂದಿವೆ. ಚಳಿಗಾಲ ಪ್ರವಾಸಕ್ಕೆ ಸೂಕ್ತ ಕಾಲ.

ಹಂಪಿ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿಗೆ ಚಳಿಗಾಲ ಹೊರತಾಗಿ ಬೇರೆ ಸಮಯದಲ್ಲಿ ಭೇಟಿ ನೀಡುವುದು ಕಷ್ಟಕರ.

ಖಜುರಾಹೋ: ಖಜುರಾಹೋ ದೇವಾಲಯಗಳು ಮಧ್ಯಪ್ರದೇಶದ ಜನಪ್ರಿಯ ಪ್ರವಾಸಿ ಸ್ಥಳ.

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಹಲವು ಪ್ರವಾಸಿ ತಾಣಗಳಿವೆ. ಚಳಿಗಾಲದ ತಣ್ಣನೆ ವಾತಾವರಣ ಪ್ರವಾಸಕ್ಕೆ ಉತ್ತಮ.

All photos: Pixabay

ಒಂದೇ ಒಂದು ಸೊಳ್ಳೆ ಇಲ್ಲದ ದೇಶವಿದು