ನಿಮಗಿದು ಗೊತ್ತೆ? ಸಮುದ್ರದ ನೀರು ಉಪ್ಪಿನ ರುಚಿ ಹೊಂದಿರುವುದೇಕೆ?
By Jayaraj Sep 16, 2024
Hindustan Times Kannada
ಒಂದು ವೇಳೆ ಸಮುದ್ರದ ನೀರು ಕುಡಿಯಲು ಯೋಗ್ಯವಾಗಿದ್ದರೆ, ಪ್ರಪಂಚದಲ್ಲಿ ನೀರಿನ ಕೊರತೆಯೇ ಆಗುತ್ತಿರಲಿಲ್ಲವೇನೋ.
ಆದರೆ, ಸಮುದ್ರದ ನೀರು ತುಂಬಾ ಉಪ್ಪಾಗಿರುತ್ತದೆ. ಇದು ಕುಡಿಯಲು ಯೋಗ್ಯವಲ್ಲ. ಸಮುದ್ರತೀರಕ್ಕೆ ಮೊದಲ ಬಾರಿ ಹೋದರೆ, ಜನರು ಈ ನೀರಿನ ರುಚಿ ನೋಡುತ್ತಾರೆ.
ಸಮುದ್ರದ ನೀರು ಏಕೆ ಉಪ್ಪು ಎಂದು ನೀವು ಯೋಚಿಸಿದ್ದೀರಾ? ಈ ಪ್ರಶ್ನೆಗೆ ವೈಜ್ಞಾನಿಕ ಉತ್ತರ ಏನು ಎಂದು ನೋಡೋಣ.
ಸಮುದ್ರಕ್ಕೆ ಉಪ್ಪು ಬರಲು 2 ಕಾರಣಗಳಿರಬಹುದು. ಮೊದಲನೆಯದ್ದು ಸಮುದ್ರದಲ್ಲಿರುವ ಹೆಚ್ಚಿನ ಉಪ್ಪು ಅಂಶ ನದಿಗಳಿಂದ ಬರುತ್ತದೆ.
ವಾಸ್ತವದಲ್ಲಿ ಮಳೆ ನೀರು ಆಮ್ಲೀಯವಾಗಿದೆ. ಈ ನೀರು ನೆಲದ ಬಂಡೆಗಳ ಮೇಲೆ ಬಿದ್ದಾಗ ಅವುಗಳ ಸವೆತವಾಗುತ್ತದೆ. ಭೂಮಿಯ ಸವೆತದಿಂದ ರೂಪುಗೊಂಡ ಲವಣಾಂಶವು ನದಿಗಳ ಮೂಲಕ ಸಮುದ್ರ ಸೇರುತ್ತದೆ. ಹೀಗಾಗಿ ನೀರು ಉಪ್ಪಾಗುತ್ತದೆ.
ಭೂಮಿಗೆ ಬಿದ್ದ ನೀರು ಸಮುದ್ರ ಸೇರಿ, ಮತ್ತೆ ಆವಿಯಾಗಿ ಮಳೆ ರೂಪದಲ್ಲಿ ಭೂಮಿಗೆ ಬೀಳುತ್ತದೆ. ಈ ಪ್ರಕ್ರಿಯೆ ವೇಳೆ ಲವಣಾಂಶಗಳು ಹಾಗೆಯೇ ಉಳಿದು ನೀರು ಮಾತ್ರ ಆವಿಯಾಗುತ್ತದೆ.
ಲಕ್ಷಾಂತರ ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸಮುದ್ರದ ನೀರು ಉಪ್ಪು ಉಪ್ಪಾಗಿದೆ. ವರ್ಷ ಕಳೆದಂತೆ ಈ ಲವಣಾಂಶದ ಪ್ರಮಾಣ ಹೆಚ್ಚಾಗಿ ಉಪ್ಪಿನ ಅಂಶವೂ ಹೆಚ್ಚಾಗುತ್ತದೆ.
ಸಮುದ್ರದ ನೀರು ಉಪ್ಪಾಗಿರಲು ಮತ್ತೊಂದು ಕಾರಣವೆಂದರೆ ಈ ನೀರಿನಲ್ಲಿ ಕ್ಲೋರಿನ್ ಮತ್ತು ಸೋಡಿಯಂ ಅಂಶ ಹೆಚ್ಚಾಗಿರುತ್ತವೆ.
All photos: Pexels
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು