ಮನುಷ್ಯನಿಗೆ ಪ್ರತಿದಿನ ನಿದ್ರೆ ತುಂಬಾ ಮುಖ್ಯ. ಗಾಢ ನಿದ್ದೆಯಲ್ಲಿರುವಾಗ ಅನೇಕ ಜನರು ಗೊರಕೆ ಹೊಡೆಯುತ್ತಾರೆ.
ನಿದ್ರಿಸುವಾಗ ಗೊರಕೆ ಹೊಡೆಯುವುದರಿಂದ ಅಕ್ಕಪಕ್ಕದಲ್ಲಿರುವವರಿಗೆ ಕಿರಿಕಿರಿ ಉಂಟಾಗುತ್ತದೆ.
ನಿದ್ರೆಯ ಸಮಯದಲ್ಲಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಕೂಡಾ ಗೊರಕೆ ಹೊಡೆಯುತ್ತವೆ.
ವಿಜ್ಞಾನದ ಪ್ರಕಾರ ನಾಯಿ, ಬೆಕ್ಕು, ಹಸು, ಎಮ್ಮೆ ಸೇರಿದಂತೆ ಬಹುತೇಕ ಎಲ್ಲಾ ಪ್ರಾಣಿಗಳಲ್ಲಿ ಗೊರಕೆ ಹೊಡೆಯುತ್ತವೆ. ಕೆಲವೊಮ್ಮೆ ಈ ಸಮಸ್ಯೆ ನಿರ್ದಿಷ್ಟ ಕಾಯಿಲೆಯ ಪ್ರಭಾವದಿಂದ ಸಂಭವಿಸುತ್ತದೆ.
ಪ್ರಾಣಿಗಳಲ್ಲಿ ಗೊರಕೆಯನ್ನು ಗೊರಕೆ ರೋಗ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಈ ರೋಗವು ಪ್ರಾಣಿಗಳ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಹೆಚ್ಚಿನ ಸಂದರ್ಭಗಳಲ್ಲಿ ತಪ್ಪಾದ ನಿದ್ರೆಯ ಅಭ್ಯಾಸದಿಂದಾಗಿ ಪ್ರಾಣಿಗಳು ಉಸಿರಾಡಲು ಕಷ್ಟಪಡುತ್ತವೆ. ಹೀಗಾಗಿ ಪ್ರಾಣಿಗಳು ಗೊರಕೆ ಹೊಡೆಯುತ್ತವೆ.
ಪ್ರಾಣಿಗಳು ನಿದ್ರೆಯಲ್ಲಿ ಉಸಿರಾಡುವಾಗ ಆಗುವ ಶಬ್ದಗಳು ಮತ್ತು ಕಂಪನವನ್ನು ಗೊರಕೆ ಎನ್ನಲಾಗುತ್ತದೆ.
ಅನೇಕ ಬಾರಿ ಕಲುಷಿತ ನೀರು ಕುಡಿಯುವುದರಿಂದ ಪ್ರಾಣಿಗಳಲ್ಲಿ ಗೊರಕೆ ಸಮಸ್ಯೆ ಉಂಟಾಗುತ್ತದೆ. ಕಲುಷಿತ ನೀರಿನಲ್ಲಿ ಇರುವ ಲಾರ್ವಾ ಸೂಕ್ಷ್ಮಜೀವಿಗಳು ಪ್ರಾಣಿಗಳ ಮೂಗಿನ ಚರ್ಮಕ್ಕೆ ಪ್ರವೇಶಿಸುತ್ತವೆ.
ಮನೆಯ ಸಾಕುಪ್ರಾಣಿಗಳು ದೀರ್ಘಕಾಲದವರೆಗೆ ಗೊರಕೆ ಹೊಡೆಯುತ್ತಿದ್ದರೆ, ಅವುಗಳನ್ನು ಒಮ್ಮೆ ಪಶುವೈದ್ಯರಿಗೆ ತೋರಿಸಿ.
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು