ಹಾವುಗಳು ನಿಜಕ್ಕೂ ಪುಂಗಿಯ ನಾದಕ್ಕೆ ತಕ್ಕಂತೆ ಕುಣಿಯುತ್ತಾ?
By Jayaraj Sep 21, 2024
Hindustan Times Kannada
ಹಾವಾಡಿಗನ ಪುಂಗಿಯನ್ನು ಊದುವಾಗ ಹಾವುಗಳು ಕುಣಿಯುವುದನ್ನು ಕೆಲವರು ನೋಡಿರಬಹುದು. ನಿಜಕ್ಕೂ ಹಾವು ಪುಂಗಿಯ ನಾದಕ್ಕೆ ತಕ್ಕನಾಗಿ ಕುಣಿಯುತ್ತಾ ಅನ್ನೋದು ಹಲವರ ಪ್ರಶ್ನೆ.
ಹಾವಾಡಿಗ ಪುಂಗಿ ಊದುವ ಸಲುವಾಗಿ ಪುಂಗಿಯನ್ನು ತೆಗೆದಾಗ, ಹಾವು ಪೆಟ್ಟಿಗೆಯಿಂದ ಹೊರಬರುತ್ತದೆ. ಪುಂಗಿಯ ನಾದಕ್ಕೆ ಹೆಡೆಯನ್ನು ಮೇಲಕ್ಕೆತ್ತಿ ಕುಣಿದಂತೆ ಮಾಡುತ್ತದೆ.
ವಾಸ್ತವದಲ್ಲಿ ಹಾವಿಗೆ ಕಿವಿಯೇ ಇಲ್ಲ. ಅವುಗಳಿಗೆ ಯಾವುದೇ ಶಬ್ದಗಳು ಕೇಳಿಸುವುದಿಲ್ಲ. ಹಾಗಿದ್ದರೂ ಪುಂಗಿ ಸದ್ದು ಅದಕ್ಕೆ ಕೇಳಿಸಲು ಹೇಗೆ ಸಾಧ್ಯ?
ತಜ್ಞರ ಪ್ರಕಾರ, ಹಾವುಗಳು ಪುಂಗಿಯ ನಾದವನ್ನು ಕೇಳುವುದೇ ಇಲ್ಲ. ಇನ್ನು ಹಾವಾಡಿಗನ ತಾಳಕ್ಕೆ ತಕ್ಕಂತೆ ಕುಣಿಯುವ ಪ್ರಶ್ನೆಯೇ ಇಲ್ಲ.
ಹಾವಾಡಿಗ ಊದುವ ಪುಂಗಿಯ ತುದಿ ಉದ್ದವಾಗಿರುತ್ತದೆ. ಅಲ್ಲದೆ ಅದರ ತುದಿಯಲ್ಲಿ ಕೆಲವು ಗಾಜಿನ ತುಂಡುಗಳು ಇರುತ್ತದೆ. ನೋಡಲು ಅದು ಅಲಂಕಾರದಂತೆ ಕಾಣುತ್ತದೆ.
ಹಾವಾಡಿಗ ಪುಂಗಿ ಊದುವಾಗ ಆ ಪುಂಗಿಯ ಆಚೀಚೆ ಅಲ್ಲಾಡಿಸುತ್ತಾನೆ. ಅಲ್ಲದೆ ದೇಹವನ್ನು ಚಲಿಸುವಂತೆ ಮಾಡುತ್ತಾನೆ. ಆಗ ಗಾಜಿನ ತುಂಡುಗಳತ್ತ ಹಾವು ಆಕರ್ಷಿತವಾಗುತ್ತವೆ.
ಹಾವುಗಳು ಚಲನೆಗೆ ಬೇಗ ಸ್ಪಂದಿಸುತ್ತವೆ. ಹೀಗಾಗಿ ಬೆಳಕಿನಿಂದಾಗಿ ಹಾವು ಕೂಡ ತನ್ನ ದೇಹವನ್ನು ಚಲಿಸಲು ಪ್ರಾರಂಭಿಸುತ್ತದೆ. ಒಂದು ವೇಳೆ ಪುಂಗಿಯಲ್ಲಿ ಗಾಜು ಇಲ್ಲವಿದ್ದರೂ, ಪುಂಗಿ ಚಲನೆಗೆ ಹಾವು ಪ್ರತಿಕ್ರಿಯೆ ನೀಡುತ್ತದೆ.
ಹಾವುಗಳಿಗೆ ಕಿವಿಗಳಿಲ್ಲ. ಹೀಗಾಗಿ ಅವು ಕೇವಲ ಕಂಪನದ ಸಹಾಯದಿಂದ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗ್ರಹಿಸುತ್ತದೆ.
ಹಾವುಗಳು ತಮ್ಮ ಅಕ್ಕ ಪಕ್ಕ ಯಾವುದೇ ಚಲನೆ ಕಂಡುಬಂದರೂ, ತನ್ನ ರಕ್ಷಣೆಯ ಸಲುವಾಗಿ ಅದು ಕೂಡಾ ಚಲಿಸುತ್ತದೆ. ಪುಂಗಿಯ ಮೂವ್‌ಮೆಂಟ್‌ಗೂ ಇದೇ ರೀತಿ ಚಲಿಸುವಾಗ ಹಾವು ಕುಣಿದಂತೆ ಕಾಣಿಸುತ್ತದೆ.