ಕೂದಲು ಬೆಳವಣಿಗೆಗೆ ಬೆಳ್ಳುಳ್ಳಿ ಎಣ್ಣೆ ಬೆಸ್ಟ್, ಮನೆಯಲ್ಲೇ ಮಾಡ್ಬೋದು

By Jayaraj
Sep 28, 2024

Hindustan Times
Kannada

ಕೂದಲು ಉದುರುವ ಸಮಸ್ಯೆ ಬಹುತೇಕ ಹಲವರಿಗೆ ಇದೆ. ಭಿನ್ನ ವಿಭಿನ್ನ ಎಣ್ಣೆ ಹಚ್ಚಿ ನೋಡಿದರೂ ಪರಿಹಾರ ಸಿಗದಿರಬಹುದು. ಇದಕ್ಕೆ ಬೆಳ್ಳುಳ್ಳಿ ಪರಿಹಾರ ನೀಡುತ್ತೆ.

ಅಡುಗೆಗೆ ನಿತ್ಯ ಬಳಕೆಯಾಗುವ ಬೆಳ್ಳುಳ್ಳಿ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ.

ಇದರಲ್ಲಿ ವಿಟಮಿನ್ C ಮತ್ತು B6, ಸಲ್ಫರ್, ಮ್ಯಾಂಗನೀಸ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಸಮೃದ್ಧವಾಗಿದೆ. ರಕ್ತ ಪರಿಚಲನೆ ಮತ್ತು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಕೂದಲು ಉದುರುವ ಸಮಸ್ಯೆಗಳಿಗೆ ಬೆಳ್ಳುಳ್ಳಿಯನ್ನು ವಿವಿಧ ರೀತಿಯಲ್ಲಿ ಬಳಸಬಹುದು. ನಾವಿಂದು ಬೆಳ್ಳುಳ್ಳಿ ಎಣ್ಣೆ ಕುರಿತು ತಿಳಿಸಿಕೊಡುತ್ತೇವೆ.

ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಗೆ ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಕೆಲಕಾಲ ಬೇಯಿಸಿ.

ಎಣ್ಣೆ ಕುದಿದ ನಂತರ ಅದನ್ನು ಆರಲು ಬಿಡಿ. ಬಳಿಕ ಫಿಲ್ಟರ್ ಮಾಡಿ ಸೂಕ್ತ ಬಾಟಲಿಗೆ ಹಾಕಿ ಇಟ್ಟುಕೊಳ್ಳಿ.

ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ. ಕೆಲಕಾಲ ಹಾಗೆಯೇ ಬಿಟ್ಟು ಸ್ನಾನ ಮಾಡಿ.

ಬೆಳ್ಳುಳ್ಳಿ ಎಣ್ಣೆ ಕೂದಲಿನ ಬೆಳವಣಿಗೆ ಮಾತ್ರವಲ್ಲದೆ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ

ಜಪಾನಿಗರ ದೀರ್ಘಾಯಸ್ಸಿನ ಗುಟ್ಟು ಇಲ್ಲಿದೆ, ನೀವೂ ತಿಳ್ಕೊಳ್ಳಿ