ಹಲವು ಬಗೆಯ ಅಡುಗೆಗಳಿಗೆ ಬಳಕೆಯಾಗುವ ಈರುಳ್ಳಿಯಲ್ಲಿ ಹತ್ತಾರು ಔಷಧೀಯ ಗುಣಗಳಿವೆ.
ಬಂಜೆತನ ಇರುವವರಿಗೆ ಮತ್ತು ಖನಿಜಾಂಶಗಳ ಕೊರತೆ ಇರುವವರಿಗೆ ಈರುಳ್ಳಿ ಒಳ್ಳೆಯದು. ಈ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಹೆಚ್ಚು ಈರುಳ್ಳಿ ಬಳಸಿದರೆ ನಿಧಾನವಾಗಿ ಉತ್ತಮ ಫಲಿತಾಂಶ ಪಡೆಯಬಹುದು.
ಈರುಳ್ಳಿಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಕೆಂಪು ಈರುಳ್ಳಿ ನಾಸಿಕ್ ಮತ್ತು ಸೂರತ್ ತಳಿಗಳು ಎಂದು ಕರೆಯಲಾಗುತ್ತದೆ. ಇವು ದೇಹದಲ್ಲಿನ ಶಾಖ ಕಡಿಮೆ ಮಾಡುವ ಗುಣ ಹೊಂದಿದೆ.
ರಕ್ತವನ್ನು ಶುದ್ಧೀಕರಿಸುವಲ್ಲಿಯೂ ಈರುಳ್ಳಿ ಉಪಯುಕ್ತ.
ಈರುಳ್ಳಿಯನ್ನು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬಿಳಿ ಈರುಳ್ಳಿಯನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತದೆ.
ಪ್ರತಿನಿತ್ಯ ಬಿಳಿ ಈರುಳ್ಳಿ ತಿಂದರೆ ಫಂಗಲ್ ಸೋಂಕನ್ನು ಹೋಗಲಾಡಿಸಬಹುದು. ಇದು ವಿಷಕಾರಿ ಸೂಕ್ಷ್ಮಾಣುಗಳನ್ನು ನಾಶಪಡಿಸುವ ಗುಣ ಹೊಂದಿದೆ.
ಅಡುಗೆಗೆ ಬಳಸುವಾಗ ತಕ್ಷಣವೇ ಕಟ್ ಮಾಡಿದ ಈರುಳ್ಳಿ ಮಾತ್ರ ಬಳಸಬೇಕು. ಮೊದಲೇ ಕತ್ತರಿಸಿದ ಈರುಳ್ಳಿ ವಿಷಕಾರಿ.
ಬೆಳಗ್ಗೆ ಎದ್ದು ಹಲ್ಲುಜ್ಜಿ ಬಾಯಿಗೆ ಈರುಳ್ಳಿ ಹಾಕಿಕೊಂಡು ಜಗಿದರೆ ಬ್ಯಾಕ್ಟೀರಿಯಾ ಸಾಯುತ್ತದೆ.
Pexels
ದೇಶದಲ್ಲಿ ಲಭ್ಯವಿರುವ 20 ಲಕ್ಷಕ್ಕೂ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳು