ಒಂದು ದಿನಕ್ಕೆ ಗರಿಷ್ಠ ಎಷ್ಟು ಚಹಾ ಕುಡಿಯಬಹುದು?

By Jayaraj
Nov 13, 2024

Hindustan Times
Kannada

ನಮ್ಮ ಸುತ್ತಮುತ್ತ ಚಹಾ ಪ್ರಿಯರು ಹಲವು ಮಂದಿ ಇರುತ್ತಾರೆ. ಕೆಲವೊಬ್ಬರು ಒಂದೇ 8-10 ಕಪ್ ಚಹಾ ಕುಡಿಯುತ್ತಾರೆ.

ನಿತ್ಯ ಚಹಾ ಕುಡಿಯುವುದು ಕೆಟ್ಟ ಅಭ್ಯಾಸವೇನಲ್ಲ. ಆದರೆ ಅತಿಯಾಗಿ ಕುಡಿಯುವುದು ಒಳ್ಳೆಯದಲ್ಲ.

ಚಹಾದಲ್ಲಿ ಕೆಫೀನ್ ಇದೆ. ಇದನ್ನು ಅತಿಯಾಗಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಒಂದು ದಿನಕ್ಕೆ ಎಷ್ಟು ಚಹಾ ಕುಡಿಯುವುದು ಒಳ್ಳೆಯದು ಎಂಬುದನ್ನು ತಿಳಿಯೋಣ.

ಅತಿಯಾಗಿ ಅಥವಾ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಅಸಿಡಿಟಿಗೆ ಕಾರಣವಾಗಬಹುದು.

ಅತಿಯಾಗಿ ಟೀ ಕುಡಿದರೆ ನಿದ್ದೆಯ ಮೇಲೂ ಪರಿಣಾಮ ಬೀರುತ್ತದೆ. ಕೆಫೀನ್ ಸೇವನೆಯಿಂದ ನಿದ್ರೆ ಕಡಿಮೆಯಾಗುತ್ತದೆ.

ಚಹಾದಲ್ಲಿ ಹಾಲು ಮತ್ತು ಸಕ್ಕರೆ ಬಳಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.

ದಿನಕ್ಕೆ ಒಂದರಿಂದ 2 ಕಪ್ ಚಹಾ ಮಾತ್ರ ಕುಡಿಯುವುದು ಒಳ್ಳೆಯದು. ಇದಕ್ಕಿಂತ ಹೆಚ್ಚು ಚಹಾ ಕುಡಿಯುತ್ತಿದ್ದರೆ, ಈ ಅಭ್ಯಾಸವನ್ನು ಬದಲಿಸಿ.

ಹಾಲಿನ ಚಹಾ ಬದಲಿಗೆ ಗ್ರೀನ್ ಟೀ ಅಥವಾ ಕಪ್ಪು ಚಹಾ ಕುಡಿಯಬಹುದು

ಕಾವೇರಿ ವಿರುದ್ಧ ಸಾಕ್ಷಿ ಹೇಳಿದ ವೈಷ್ಣವ್