ನಾಲಿಗೆಯಲ್ಲಿದೆ ನಿಮ್ಮ ಆರೋಗ್ಯ; ಬಣ್ಣವೇ ಹೇಳುತ್ತೆ ಅನಾರೋಗ್ಯ ಸಮಸ್ಯೆ

By Jayaraj
Sep 17, 2024

Hindustan Times
Kannada

ನಿಮ್ಮ ನಾಲಿಗೆಯ ಬಣ್ಣ ಮತ್ತು ಆಕಾರದಲ್ಲಿ ಆಗುವ ಬದಲಾವಣೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳಿದ್ದರೆ ಪತ್ತೆ ಹಚ್ಚಬಹುದು.

ಬಣ್ಣದಲ್ಲಿ ಸಣ್ಣ ಬದಲಾವಣೆಗಳಿದ್ದರೆ ಸಮಸ್ಯೆ ಇಲ್ಲ. ಆದರೆ ಕೆಲವೊಂದು ದೊಡ್ಡ ಬದಲಾವಣೆಗಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು.

ನಾಲಿಗೆ ಹಳದಿ ಬಣ್ಣಕ್ಕೆ ತಿರುಗಿದರೆ, ಸಾಮಾನ್ಯವಾಗಿ ಅದು ಬಾಯಿಯ ಕಳಪೆ ನೈರ್ಮಲ್ಯವನ್ನು ಸೂಚಿಸುತ್ತದೆ. ಶುಷ್ಕತೆಯಿಂದ ಬ್ಯಾಕ್ಟೀರಿಯಾ ಬೆಳವಣಿಗೆಯಾಗಿ ಮಧುಮೇಹ ಅಥವಾ ಕಾಮಾಲೆಯ ಲಕ್ಷಣ ಇರಬಹುದು.

ಕಿತ್ತಳೆ ಬಣ್ಣದ ನಾಲಿಗೆಯು ಆಂಟಿಬಯೋಟಿಕ್ ಬಳಕೆ ಅಥವಾ ಬಾಯಿಯ ನೈರ್ಮಲ್ಯದಲ್ಲಿ ಸಮಸ್ಯೆಗಳನ್ನು ಸೂಚಿಸುತ್ತದೆ.

ತಿಳಿ ಗುಲಾಬಿ ಬಣ್ಣದಿಂದ ಬಿಳಿ ಪ್ಯಾಚ್‌ ಕಂಡುಬಂದರೆ, ಕೆಲ ಸಮಯದಲ್ಲಿ ಲ್ಯುಕೋಪ್ಲಾಕಿಯಾದಂತಹ ಶಿಲೀಂಧ್ರಗಳ ಸೋಂಕನ್ನು ಸೂಚಿಸುತ್ತದೆ. 

ನಾಲಿಗೆಯು ತಿಳಿ ಗುಲಾಬಿ ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾದರೆ ಅಥವಾ ನೀಲಿ ಚುಕ್ಕೆಗಳು ಕಂಡುಬಂದರೆ ಆಮ್ಲಜನಕದ ಕೊರತೆ, ರಕ್ತದ ಅಸ್ವಸ್ಥತೆ, ಮೂತ್ರಪಿಂಡದ ಕಾಯಿಲೆಯಂಥ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ.

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva