ನೀಳ ಕೇಶರಾಶಿಗೆ ಮನೆಯಲ್ಲೇ ತಯಾರಿಸಿ ಹರ್ಬಲ್ ಹೇರ್ ಆಯಿಲ್

pixabay

By Jayaraj
Jun 16, 2024

Hindustan Times
Kannada

ಕೂದಲು ಬೇಗನೆ ಉದ್ದ ಬರಬೇಕೆಂಬುದು ನಾರಿಯರ ಆಸೆ. ಮಾರುಕಟ್ಟೆಯಲ್ಲಿ ಸಿಗುವ ಎಣ್ಣೆ ಹಚ್ಚಿದರೂ ಫಲಿತಾಂಶ ಸಿಗುವುದಿಲ್ಲ. ಇಂಥಾ ಸಂದರ್ಭದಲ್ಲಿ ಮನೆಯಲ್ಲೇ ಹೇರ್‌ ಆಯಿಲ್‌ ತಯಾರಿಸಬಹುದು.

pixabay

ಗಿಡಮೂಲಿಕೆ ಅಥವಾ ಮನೆಯಲ್ಲೇ ಲಭಿಸುವ ವಸ್ತುಗಳನ್ನು ಬಳಸಿ ನೀವು ಹೇರ್‌ ಆಯಿಲ್‌ ಸಿದ್ಧಪಡಿಸಿ. ಈ ಸರಳ ಹಂತದ ಎಣ್ಣೆಯು ಕೂದಲ ಆರೋಗ್ಯ ಹಾಗೂ  ಬೆಳವಣಿಗೆ ಉತ್ತೇಜಿಸುತ್ತದೆ.

pixabay

ತೆಂಗಿನ ಎಣ್ಣೆ - 200 ಎಂಎಲ್ ಕ್ಯಾಸ್ಟರ್ ಆಯಿಲ್ - 50 ಎಂಎಲ್ ಆಲಿವ್ ಎಣ್ಣೆ - 50 ಎಂಎಲ್ ರೋಸ್ಮರಿ ಎಸೆನ್ಶಿಯಲ್ ಆಯಿಲ್ - 10 ಹನಿ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ - 10 ಹನಿ

ಬೇಕಾಗುವ ವಸ್ತುಗಳು 

pixabay

ಮೆಂತ್ಯೆ - 2 ಟೇಬಲ್‌ಸ್ಪೂನ್ ಕರಿಬೇವಿನ ಎಲೆ - ಒಂದು ಹಿಡಿ ನೆಲ್ಲಿಕಾಯಿ ಪುಡಿ - 2 ಟೇಬಲ್‌ಸ್ಪೂನ್ ದಾಸವಾಳ ಹೂ (ಬಿಳಿ) - 5ರಿಂದ 6 ಭೃಂಗರಾಜ್ ಪೌಡರ್ - 2 ಟೇಬಲ್‌ಸ್ಪೂನ್ ಬೇವಿನ ಎಲೆ - ಒಂದು ಹಿಡಿ

ಬೇಕಾಗುವ ವಸ್ತುಗಳು 

pixabay

ಒಂದು ಬೌಲ್‌ಗೆ ತೆಂಗಿನ ಎಣ್ಣೆ, ಕ್ಯಾಸ್ಟರ್ ಆಯಿಲ್ ಮತ್ತು ಆಲಿವ್ ಎಣ್ಣೆ ಹಾಕಿ ಮಿಶ್ರಣ ಮಾಡಿ. ಅದಕ್ಕೆ ಮೆಂತ್ಯೆ ಬೀಜ ಹಾಕಿ ಮಿಶ್ರಣ ಮಾಡಿ.

pixabay

ಬಳಿಕ ಕರಿಬೇವು, ಬೇವಿನ ಎಲೆ, ದಾಸವಾಳ ಹೂಗಳನ್ನು ಸೇರಿಸಿ. ಆಮ್ಲಾ ಮತ್ತು ಭೃಂಗರಾಜ ಪುಡಿ ಕೂಡಾ ಮಿಶ್ರಣ ಮಾಡಿ.

pixabay

ಎಲ್ಲವನ್ನೂ ಸೇರಿಸಿದ ಎಣ್ಣೆಯ ಮಿಶ್ರಣವನ್ನು ಬಿಸಿ ಮಾಡಿ.

pixabay

ಎಣ್ಣೆಯ ಮಿಶ್ರಣವನ್ನು ಲೋಹದ ಪಾತ್ರೆಗೆ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಆಗಾಗ ಸೌಟ್‌ ಹಾಕಿ ತಿರುವಿ. ಸುಮಾರು 15-20 ನಿಮಿಷಗಳ ಕಾಲ ಬೆಚ್ಚಗಾಗಲು ಬಿಡಿ.

pixabay

ಬಿಸಿಯಾದ ನಂತರ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಬಳಿಕ ಎಣ್ಣೆ ಸ್ಟೋರ್‌ ಮಾಡುವ ಬಾಟಲಿಗೆ ಹಾಕಿಡಿ.

pixabay

ಹೆಚ್ಚು ಸಾಕ್ಷರತೆ ಇರುವ ಭಾರತದ ಟಾಪ್‌ 10 ರಾಜ್ಯಗಳು