ಸ್ನಾನ ಮಾಡುವಾಗ ನೀವು ಕೂಡಾ ಈ ತಪ್ಪು ಮಾಡ್ತೀರಾ?

By Jayaraj
Oct 15, 2024

Hindustan Times
Kannada

ಸ್ನಾನ ಮಾಡಲು ಕೂಡಾ ಸರಿಯಾದ ಕ್ರಮ ಇದೆಯೇ ಎಂದು ನೀವು ಕೇಳಬಹುದು.

ಹೆಚ್ಚಿನ ಜನರು ಸ್ನಾನ ಮಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹೀಗಾಗಿ ಯಾವುದು ಸರಿ ಮತ್ತು ತಪ್ಪು ಎಂದು ನೋಡೋಣ.

ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಹೇಗೆ ಸ್ನಾನ ಮಾಡಬೇಕು ಎಂದು ವಿವರಿಸುವ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ನೇರವಾಗಿ ದೇಹಕ್ಕೆ ನೀರು ಸುರಿದು ಸ್ನಾನ ಆರಂಭಿಸಿ ನಂತರ ತಲೆಯನ್ನು ನೆನೆಸಿದರೆ, ದೇಹದ ಶಾಖ ಮೆದುಳಿಗೆ ತಲುಪುತ್ತದೆ ಎನ್ನುತ್ತಾರೆ ವಾಸುದೇವ್.

ಹಿಂದೆ ಜನರು ನದಿ ಅಥವಾ ಕೊಳದಲ್ಲಿ ಹೆಚ್ಚಾಗಿ ಸ್ನಾನ ಮಾಡುತ್ತಿದ್ದರು. ಆಗ ಅವನ ದೇಹದೊಂದಿಗೆ ತಲೆಯ ಭಾಗ ಕೂಡಾ ನೀರಿನಲ್ಲಿ ಮುಳುಗುತ್ತಿತ್ತು. 

ಹೀಗಾಗಿ ಮೊದಲು ತಲೆಗೆ ನೀರು ಸುರಿಯಬೇಕು. ನಂತರ ದೇಹಕ್ಕೆ ನೀರನ್ನು ಸುರಿಯಬೇಕು. ಇದು ದೇಹದ ಉಷ್ಣತೆ ಹೆಚ್ಚಾಗುವುದನ್ನು ತಡೆಯುತ್ತದೆ.

ನಿಮ್ಮ ತಲೆ ಸ್ನಾನ ಇಷ್ಟವಿಲ್ಲದಿದ್ದರೆ, ಕೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ತಲೆ ಮೇಲೆ ಚಿಮುಕಿಸಿ. ನಂತರ ದೇಹಕ್ಕೆ ಸ್ನಾನ ಮಾಡಿ.

ಸ್ನಾನಕ್ಕೆ ಉಗುರುಬೆಚ್ಚನೆಯ ನೀರು ಉತ್ತಮವೆಂದು ಹೇಳಲಾಗುತ್ತದೆ. ಅತಿ ಬಿಸಿಯಾದ ಅಥವಾ ತಣ್ಣನೆಯ ನೀರಿನಿಂದ ಸ್ನಾನ ಮಾಡಿದರೆ ಚರ್ಮ ಒಣಗುತ್ತದೆ.

ನೀವು ವ್ಯಾಯಾಮ ಮಾಡಿದರೆ ಪ್ರತಿದಿನ ಸ್ನಾನ ಮಾಡಬೇಕು. ಇದು ದೇಹದ ಕೊಳೆ ಮತ್ತು ಬೆವರಿನ ವಾಸನೆಯನ್ನು ತೆಗೆದುಹಾಕುತ್ತದೆ.

ಬೇಸಿಗೆಯಲ್ಲಿ ಬೆಲ್ಲ ತಿನ್ನುವುದರಿಂದಾಗುವ 7 ಪ್ರಯೋಜನಗಳು