ಮೃದು ಚಪಾತಿ ಮಾಡಲು ಸುಲಭದ ಟಿಪ್ಸ್ ಇಲ್ಲಿದೆ

By Jayaraj
Oct 18, 2024

Hindustan Times
Kannada

ಗೋಧಿ ಹಿಟ್ಟಿನ ಚಪಾತಿ ಮೃದುವಾಗಿ ಬರುತ್ತಿಲ್ಲ ಅನ್ನೋದು ಹಲವರ ಗೋಳು. ಕೆಲವೊಮ್ಮೆ ಚಪಾತಿ ಮಾಡುವಾಗ ಮೃದುವಾಗಿದ್ದರೂ, ನಂತರ ಗಟ್ಟಿಯಾಗುತ್ತದೆ.

ಬೆಳಗ್ಗೆ ಚಪಾತಿ ಮಾಡಿ ಕಚೇರಿ ಅಥವಾ ಮಕ್ಕಳ ಟಿಫನ್‌ಗೆ ಹಾಕಿದರೆ, ತಿನ್ನುವ ವೇಳೆ ಅದು ಗಟ್ಟಿಯಾಗುತ್ತದೆ.

ತಿನ್ನುವಾಗಲೂ ಚಪಾತಿ ಮೃದುವಾಗಬೇಕೆಂದರೆ, ನಿಮ್ಮ ಅಡುಗೆ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ. ಇದರಿಂದ ಗಂಟೆಗಳು ಕಳೆದರೂ ಸಾಫ್ಟ್‌ ಆಗಿರುತ್ತದೆ.

ಚಪಾತಿ ಹಿಟ್ಟು ಕಲಸುವಾಗ ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಸ್ವಲ್ಪ ಸ್ವಲ್ಪ ನೀರು ಸೇರಿಸಿ ಮೃದುವಾದ ಹಿಟ್ಟಿನ ಹದಕ್ಕೆ ಕಲಸಿ.

ಹಿಟ್ಟು ಬೆರೆಸಿದ ನಂತರ ಅದನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ಇರಿಸಿ. ತಕ್ಷಣ ಚಪಾತಿ ಮಾಡಬೇಡಿ.

5 ನಿಮಿಷಗಳ ನಂತರ ಹಿಟ್ಟನ್ನು ಮತ್ತೊಮ್ಮೆ ನಾದಿಕೊಂಡು ಸಣ್ಣ ಉಂಡೆಗಳನ್ನು ಮಾಡಿ.

ಈಗ ಚಪಾತಿ ಲಟ್ಟಿಸಿಕೊಂಡು ತವಾ ಮೇಲೆ ಕಡಿಮೆ ಉರಿಯಲ್ಲಿ ಕಾಯಿಸಿ. ನಂತರ ಉರಿಯನ್ನು ಹೆಚ್ಚಿಸಿ ಮತ್ತೆ ಬೇಯಿಸಿ. ಇದು ನಿಮ್ಮ ರೊಟ್ಟಿಯನ್ನು ಮೃದುವಾಗಿಸುತ್ತದೆ.

ರೊಟ್ಟಿಯನ್ನು ತಕ್ಷಣವೇ ಮುಚ್ಚಿಡಬೇಡಿ. ಕಾಯಿಸಿದ ತಕ್ಷಣ ಸಿಲ್ವರ್‌ ಪೇಪರ್‌ ಅಥವಾ ಫಾಯಿಲ್‌ನಲ್ಲಿ ಸುತ್ತಿಟ್ಟರೆ, ಬಿಸಿ ಹಬೆ ಹರಡುತ್ತದೆ.

ನೀವು ಹಿಟ್ಟನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದರೆ, ತೆಗೆದ ತಕ್ಷಣವೇ ಚಪಾತಿ ಮಾಡಬೇಡಿ. ಬೇಗನೆ ಫ್ರಿಜ್‌ನಿಂದ ಎತ್ತಿಟ್ಟು ತಾಪಮಾನ ಸರಿಹೋದ ಮೇಲೆ ಬಳಸಿ.

ಐಪಿಎಲ್‌ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.