ಭಾರತದಲ್ಲಿರುವ 10 ಅಪಾಯಕಾರಿ ಹಾವುಗಳು ಮತ್ತು ಅದರ ವಿಷದ ಮಟ್ಟ

By Jayaraj
Jun 14, 2024

Hindustan Times
Kannada

ಜೀವವೈವಿಧ್ಯಕ್ಕೆ ಹೆಸರಾದ ಭಾರತದಲ್ಲಿ ವಿವಿಧ ಜಾತಿಯ ಹಾವುಗಳು ಕಾಣಸಿಗುತ್ತವೆ. ಕಾಳಿಂಗ ಸರ್ಪದಿಂದ ಅಪಾಯಕಾರಿ ಕೊಳಕು ಮಂಡಲ ಹಾವು ಭಾರತದಲ್ಲಿದೆ.

ಈ ಹಾವುಗಳ ವಿಷದ ಮಟ್ಟ ಎಷ್ಟಿರುತ್ತದೆ ಎಂಬುದನ್ನು ತಿಳಿದುಕೊಂಡಿರುವುದು ತುಂಬಾ ಮುಖ್ಯ.

ಬಿದಿರು ಗುಳಿಮಂಡಲ: ಈ ಹಾವನ್ನು ಅದರ ಹಸಿರು ಬಣ್ಣದಿಂದ ಸುಲಭವಾಗಿ ಗುರುತಿಸಬಹುದು. ತೀವ್ರ ಊತ ಮತ್ತು ನೋವಿಗೆ ಕಾರಣವಾಗುವ ಹೆಮೋಟಾಕ್ಸಿಕ್ ವಿಷ ಇದರಲ್ಲಿದೆ. ಇದು ಮಾರಕ ವಿಷ ಅಲ್ಲ.

ನಾಗರಹಾವು: ನಾಗರಹಾವಿನಲ್ಲಿ ಪ್ರಬಲ ನ್ಯೂರೋಟಾಕ್ಸಿನ್ ವಿಷ ಇರುತ್ತದೆ. ಇದು ಕಚ್ಚಿದರೆ ಪಾರ್ಶ್ವವಾಯು ಮತ್ತು ಉಸಿರಾಟದ ವೈಫಲ್ಯದಿಂದ ಸಾವು ಸಂಭವಿಸುತ್ತದೆ. ಭಾರತದಲ್ಲಿ ಪೂಜನೀಯ ಸ್ಥಾನ ಹೊಂದಿರುವ ಹಾವು ಇದು.

ಹಸಿರು ಗುಳಿಮಂಡಲ: ಗ್ರೀನ್ ಪಿಟ್ ವೈಪರ್ ಮಧ್ಯಮ ವಿಷಕಾರಿ ಹಾವು. ಕಚ್ಚಿದರೆ ನೋವು ಮತ್ತು ಊತ ಕಾಣಿಸುತ್ತದೆ. ಹೆಚ್ಚು ಮಾರಣಾಂತಿಕ ಅಲ್ಲ. ದಟ್ಟ ಕಾಡುಗಳಲ್ಲಿ ಹೆಚ್ಚಾಗಿ ಕಾಣುವ ಹಾವು ಮರೆಮಾಚಿಕೊಂಡಿರುತ್ತದೆ.

ಗೂನು ಮೂಗಿನ ಗುಳಿ ಮಂಡಲ / ತೌಡು ಕಂದೋಡಿ: ಇಂಗ್ಲೀಷ್‌ನಲ್ಲಿ ಪಿಟ್ ವೈಪರ್ ಎಂದು ಕರೆಯಲಾಗುವ ಈ ವಿಷಕಾರಿ ಹಾವು ಕಚ್ಚಿದರೆ ಊತ ಮತ್ತು ಭಾರಿ ನೋವು ಉಂಟಾಗುತ್ತದೆ. ಸರಿಯಾದ ವೈದ್ಯಕೀಯ ಆರೈಕೆಯಾದರೆ ಸಾವು ಅಪರೂಪ.

ಕಟ್ಟು ಹಾವು: ಇಂಡಿಯನ್‌ ಕ್ರೈಟ್‌ ಹಾವಿನ ವಿಷವು ಹೆಚ್ಚು ನ್ಯೂರೋಟಾಕ್ಸಿಕ್ ಆಗಿದೆ. ಸ್ನಾಯು ಪಾರ್ಶ್ವವಾಯು ಮತ್ತು ಉಸಿರಾಟದ ವೈಫಲ್ಯಕ್ಕೆ ಕಾರಣವಾಗಬಹುದು. ರಾತ್ರಿಯ ವೇಳೆ ಸಾಮಾನ್ಯವಾಗಿ ತಂಪಾದ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ

ಹೆಬ್ಬಾವು: ವಿಷಕಾರಿಯಲ್ಲದ ಈ ಹಾವು ನೋಡಲು ದೊಡ್ಡ ಗಾತ್ರದ ಹಾವು. ಪ್ರಚೋದನೆಗೆ ಒಳಗಾಗದ ಹೊರತು ಮನುಷ್ಯರಿಗೆ ಅಪಾಯ ಮಾಡುವುದಿಲ್ಲ.

ಕಾಳಿಂಗ ಸರ್ಪ: ದೈತ್ಯಾಕಾರದ ವಿಷಕಾರಿ ಹಾವಿನ ನ್ಯೂರೋಟಾಕ್ಸಿಕ್ ವಿಷವು ಮನುಷ್ಯರಯ ಮಾತ್ರವಲ್ಲದೆ ದೊಡ್ಡ ಗಾತ್ರದ ಆನೆಗಳಿಗೂ ಅತ್ಯಂತ ವಿಷಕಾರಿ. ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವಿನ ಅಪಾಯ ಎದುರಾಗಬಲ್ಲದು.

ಮಲಬಾರ್ ಗುಳಿಂಡಲ: ಮಲಬಾರ್ ಪಿಟ್ ವೈಪರ್ ಕೇರಳ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತವೆ. ಭಿನ್ನ ದೇಹರಚನೆಯ ಈ ವಿಷಕಾರಿ ಹಾವು ನೋವು ಮತ್ತು ಊತವನ್ನು ಉಂಟುಮಾಡುತ್ತದೆ.

ಕೊಳಕು ಮಂಡಲ: ರಸ್ಸೆಲ್ಸ್ ವೈಪರ್ ಭಾರಿ ಹೆಮೋಟಾಕ್ಸಿಕ್ ವಿಷ ಹೊಂದಿದೆ. ಕಚ್ಚಿದ ಕೆಲವು ಗಂಟೆಗಳ ಬಳಿಕ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಕಚ್ಚಿದ ಭಾಗವು ನಂಜಿನಿಂದ ಕೊಳೆಯುತ್ತದೆ. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ನಿಧಾನವಾಗಿ ಮಾರಣಾಂತಿಕವಾಗುತ್ತದೆ.

All Photo: Pixabay

ಒಲಿಂಪಿಕ್ಸ್‌: ಡ್ರಗ್ ಪ್ರಕರಣದಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಯಾರು?