ವೈವಿಧ್ಯಮಯ ಆಹಾರಕ್ಕೆ ಭಾರತ ಹೆಸರುವಾಸಿ. ವಡೆಯಲ್ಲೇ ಹತ್ತಾರು ಬಗೆಯ ವಡೆಗಳನ್ನು ನಮ್ಮಲ್ಲಿ ಮಾಡುತ್ತಾರೆ.
pixabay
ಮಳೆಗಾಲದಲ್ಲಿ ಮನೆಯಲ್ಲೇ ಮಾಡಿ ಸವಿಯಲು ದೇಶದ ಬಗೆಬಗೆಯ ವಡೆಗಳು ಇಲ್ಲಿವೆ ನೋಡಿ.
pixabay
ಉದ್ದಿನ ವಡೆ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ತಿಂಡಿ. ಉದ್ದಿನ ಬೇಳೆಯಿಂದ ತಯಾರಿಸುವ ವಡೆ, ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ರುಚಿಕರ.
pixabay
ರಾಜಸ್ಥಾನಿ ಮಿರ್ಚಿ ವಡಾ: ರಾಜಸ್ಥಾನದ ಬಹಳ ಜನಪ್ರಿಯ ತಿಂಡಿ. ಹಸಿರು ಮೆಣಸಿನಕಾಯಿ, ಬೇಳೆ ಹಿಟ್ಟಿನಲ್ಲಿ ಈ ವಡೆ ತಯಾರಿಸಲಾಗುತ್ತದೆ. ಇದಕ್ಕೆ ಆಲೂಗಡ್ಡೆ ತುಂಬಿಸಿ ಕರಿಯಲಾಗುತ್ತದೆ.
pixabay
ಬಟಾಟೆ ವಡಾ: ಮಹಾರಾಷ್ಟ್ರದ ಈ ತಿಂಡಿಯನ್ನು ಆಲೂಗಡ್ಡೆ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ.
Pexels
ಮೊಸರು ವಡಾ: ಉದ್ದಿನ ಬೇಳೆಯಿಂದ ಮಾಡುವ ವಡೆಯನ್ನು ಬೆಚ್ಚಗಿನ ಉಪ್ಪು ನೀರಿನಲ್ಲಿ ನೆನೆಸಿ ಮತ್ತು ನಂತರ ಸಿಹಿ ಮೊಸರಿನಲ್ಲಿ ಮುಳುಗಿಸಲಾಗುತ್ತದೆ. ಸಿಹಿ ಇಷ್ಟಪಡುವವರಿಗೆ ಇದು ಉತ್ತಮ ತಿಂಡಿ
Pexels
ವೆಲ್ಲಾ ವಡಾ: ಇದು ಆಂಧ್ರಪ್ರದೇಶದ ಜನಪ್ರಿಯ ಸಿಹಿ ತಿಂಡಿ. ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ.
Instagram
ಕಲ್ಮಿ ವಡಾ: ಕಲ್ಮಿ ವಡಾ ರಾಜಸ್ಥಾನದ ಜನಪ್ರಿಯ ತಿಂಡಿ. ಚನ್ನಾ ದಾಲ್, ಉರ್ದು, ಹೆಸರು ಬೇಳೆಗಳಿಂದ ತಯಾರಿಸಲಾಗುತ್ತದೆ.