ಹಸಿ ಹಾಲು ಮುಖಕ್ಕೆ ಹಚ್ಚಿದರೆ ಇಷ್ಟೆಲ್ಲಾ ಲಾಭ
By Jayaraj
Jun 10, 2024
Hindustan Times
Kannada
ಹಾಲಿನಲ್ಲಿ ಅನೇಕ ಪೋಷಕಾಂಶಗಳಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೇರಳವಾಗಿದೆ. ಹೀಗಾಗಿ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
ಹಾಲು ಕುಡಿಯಲು ಮಾತ್ರವಲ್ಲದೆ, ಅದನ್ನು ಮುಖಕ್ಕೆ ಹಚ್ಚಬಹುದು. ರಾತ್ರಿ ಮಲಗುವ ಮುನ್ನ ಹಸಿ ಹಾಲನ್ನು ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ.
ಮಲಗುವ ಮುನ್ನ ಹಸಿ ಹಾಲನ್ನು ಮುಖಕ್ಕೆ ಹಚ್ಚಿದರೆ ತ್ವಚೆಯ ಬಣ್ಣ ಸುಧಾರಿಸುತ್ತದೆ.
ಹತ್ತಿಯನ್ನು ಹಸಿ ಹಾಲಲ್ಲಿ ಅದ್ದಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚುವುದರಿಂದ ತ್ವಚೆಯಲ್ಲಿ ಹೊಳಪು ಬರುತ್ತದೆ.
ತ್ವಚೆಯು ಶುಷ್ಕವಾಗಿದ್ದರೆ, ಹಸಿ ಹಾಲು ಉತ್ತಮ. ಮಾಯಿಸ್ಚರೈಸರ್‌ನಂತೆ ಇದು ಮುಖದಲ್ಲಿ ತೇವಾಂಶ ಕಾಪಾಡುತ್ತದೆ.
ಹಸಿ ಹಾಲಿಗೆ ಅರಿಶಿನ ಬೆರೆಸಿ ಹಚ್ಚಿದರೆ ಮೊಡವೆ ನಿವಾರಣೆಯಾಗುತ್ತದೆ.
ಹಸಿ ಹಾಲಿಗೆ ಮುಲ್ತಾನಿ ಮಿಟ್ಟಿ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಟ್ಯಾನಿಂಗ್‌ನಿಂದ ಮುಕ್ತಿ ಸಿಗುತ್ತದೆ.
ಮುಖ ಕಾಂತಿ ಕಳೆದುಕೊಂಡು ಡೆಡ್ ಸ್ಕಿನ್ ಬೇರ್ಪಡುತ್ತಿದ್ದರೆ, ಹಾಲಿಗೆ ಸ್ವಲ್ಪ ಕಡಲೆ ಹಿಟ್ಟು ಬೆರೆಸಿ 2-3 ನಿಮಿಷ ಮಸಾಜ್ ಮಾಡಿ. ಈ ಫೇಸ್ ಸ್ಕ್ರಬ್‌ನಿಂದ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
ಹಸಿ ಹಾಲನ್ನು ನೇರವಾಗಿ ಮುಖಕ್ಕೆ ಹಚ್ಚಬಹುದು. ಅದನ್ನು ಹತ್ತಿ ಅಥವಾ ಕೈಗಳಿಂದ ನೇರವಾಗಿ ಹಚ್ಚಬಹುದು.
ಹಾಲಿಗೆ ಏನನ್ನಾದರೂ ಬೆರೆಸಿ ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ. ಸೂಕ್ಷ್ಮ ಚರ್ಮವಿದ್ದರೆ ಅಲರ್ಜಿ ಆಗುವ ಸಾಧ್ಯತೆ ಇದೆ.
ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ