ತಾಜಾ ಪುದೀನ ಎಲೆ ಜಗಿಯುವುದರಿಂದ ಹತ್ತಾರು ಲಾಭ

By Jayaraj
Jun 28, 2024

Hindustan Times
Kannada

ಪುದೀನದಲ್ಲಿ ಅಪಾರ ಪೋಷಕಾಂಶಗಳಿವೆ. ತಾಜಾ ಎಲೆಗಳನ್ನು ಜಗಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ನೋಡೋಣ.

ಪುದೀನ ಎಲೆಗಳು ಆರೋಗ್ಯಕ್ಕೆ ಅಮೃತವಿದ್ದಂತೆ. ಇದರ ವಿಶೇಷ ಗುಣಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ಪುದೀನವನ್ನು ಅಡುಗೆಯಲ್ಲಿ ಬಳಸುವುದರ ಜೊತೆಗೆ, ನೀವು ಪ್ರತಿದಿನ ತಾಜಾ ಎಲೆಗಳನ್ನು ಜಗಿದು ತಿನ್ನಬಹುದು.

ಪುದೀನ ಎಲೆಗಳಲ್ಲಿ ವಿಟಮಿನ್ ಎ, ಸಿ, ಬಿ6, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳಿವೆ.

ಪುದೀನ ಎಲೆಗಳನ್ನು ಪ್ರತಿದಿನ ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

ಬಾಯಿಯ ಆರೋಗ್ಯಕ್ಕೆ ಪುದೀನ ಉತ್ತಮ. ವಸಡುಗಳು ಮತ್ತು ಹಲ್ಲಿನ ಆರೋಗ್ಯಕ್ಕೆ ಉತ್ತಮ.

ಪುದೀನಾದಲ್ಲಿರುವ ಔಷಧೀಯ ಗುಣಗಳು ದೇಹದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ, ಗ್ಯಾಸ್ ಮತ್ತು ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ.

ಎಲೆಗಳಲ್ಲಿ ಅಲರ್ಜಿ ವಿರೋಧಿ ಗುಣಗಳಿವೆ. ಇದು ಅಲರ್ಜಿ ಮತ್ತು ಆಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ

ಅಡುಗೆ ಇನ್ನಷ್ಟು ರುಚಿಕರವಾಗಿಸಲು ಸೂಪರ್ ಟಿಪ್ಸ್