ಮಳೆಯಲ್ಲಿ ನೆನೆಯೋದು ಖುಷಿ, ಕೂದಲು ಹಾಳಾಗದಂತೆ ಹೀಗೆ ಜೋಪಾನ ಮಾಡಿ

By Jayaraj
Jul 11, 2024

Hindustan Times
Kannada

ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟ. ಮಳೆಗಾಲದಲ್ಲಿ ನೆನೆಯೋದು ಅಂದ್ರೆ ಇನ್ನೂ ಇಷ್ಟ. ಆದರೆ ಮಳೆ ನೀರು ಕೂದಲಿಗೆ ಒಳ್ಳೆಯದಲ್ಲ ಎಂದು ನಿಮಗೆ ಗೊತ್ತಾ?

ಮಳೆ ನೀರು ಕೂದಲಿಗೆ ಒಳ್ಳೆಯದಲ್ಲ. ಮಳೆಗೆ ನೆನೆಯುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಹೀಗಾಗಿ ಆರೈಕೆ ಮುಖ್ಯ.

ಮಳೆಯಲ್ಲಿ ನೆನೆದ ನಂತರ, ಮೊದಲಿಗೆ ಒದ್ದೆ ಕೂದಲನ್ನು ಟವೆಲ್‌ನಿಂದ ಒರೆಸಿ.

ಕೂದಲನ್ನು ಒರೆಸಿದ ನಂತರ, ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ. ಮಳೆ ನೀರಿಗೆ ನೆನೆದು ಹಾಗೆಯೇ ಬಿಟ್ಟರೆ ನೆತ್ತಿಯ ಸೋಂಕು ಉಂಟಾಗುತ್ತದೆ.

ಶಾಂಪೂ ನಂತರ ಕಂಡಿಷನರ್ ಬಳಸಿ. ಕಂಡೀಷನರ್ ಕೂದಲಿಗೆ ಹೊಳಪು ತರುವ ಜೊತೆಗೆ ಕೂದಲನ್ನೂ ನಾಜೂಕಾಗಿಸುತ್ತದೆ.

ಟವೆಲ್‌ನಿಂದ ಕೂದಲನ್ನು ಚೆನ್ನಾಗಿ ಒರೆಸಿ ಒಣಗಿಸಿ. ಬಳಿಕ ಕೂದಲಿನ ಸೀರಮ್ ಹಚ್ಚಿ.

ಬಾಚಣಿಗೆಯಿಂದ ಕೂದಲ ಸಿಕ್ಕು ಬಿಡಿಸಿ. ಇದರಿಂದ ಕೂದಲು ಉದುರುವುದಿಲ್ಲ.

ಸ್ನಾನದ ನಂತರ ಕೂದಲನ್ನು ಹೆಣೆಯಬೇಡಿ ಅಥವಾ ಕಟ್ಟಬೇಡಿ. 

ಸಾಧ್ಯವಾದಷ್ಟು ಮಳೆಗೆ ನೆನೆಯುವ ಮುನ್ನ ಹೇರ್ ಕ್ಯಾಪ್ ಧರಿಸಿ.

ಮತ್ತೆ ನಾಗಿಣಿ ಲುಕ್‌ನಲ್ಲಿ ನಟಿ ನಮ್ರತಾ ಗೌಡ

Instagram (All Photos)