ಭಾರತದ ಮಸಾಲೆಗಳು ವಿಶ್ವದಲ್ಲೇ ಫೇಮಸ್. ಮಸಾಲೆಗಳು ಅಡುಗೆ ರುಚಿ ಮತ್ತು ಪರಿಮಳ ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ಕಾಳುಮೆಣಸು, ಅರಿಶಿನ ಮತ್ತು ಲವಂಗವನ್ನು ಅಡುಗೆ ಮಾಡುವಾಗ ಹೆಚ್ಚಾಗಿ ಬಳಸಲಾಗುತ್ತದೆ. ಈ ಮಸಾಲೆಗಳು ಅನೇಕ ಆರೋಗ್ಯ ಪ್ರಯೋಜನ ಹೊಂದಿವೆ.
ಭಾರತದಲ್ಲಿ ಜಾಪತ್ರೆ ಕೂಡಾ ಪ್ರಮುಖ ಮಸಾಲೆ. ಜಾಯಿಜಾಯಿ ಮೇಲ್ಗಡೆ ಹೂವಿನಂತೆ ಇರುವ ಪದಾರ್ಥವಿದು.
ಜಾಪತ್ರೆಯನ್ನು ಸರಿಯಾಗಿ ಬಳಸದಿದ್ದರೆ, ಅದು ಆಹಾರದ ರುಚಿಯನ್ನು ಹಾಳುಮಾಡುತ್ತದೆ. ಹೀಗಾಗಿ ಜಾಪತ್ರೆಯ ಸರಿಯಾದ ಬಳಕೆ ಹೇಗೆ ನೋಡೋಣ.
ಭಾರತೀಯ ಅಡುಗೆಗಳಲ್ಲಿ ಪರಿಮಳ ಹೆಚ್ಚಿಸಲು ಜಾಪತ್ರೆ ಬಳಸಲಾಗುತ್ತದೆ. ಅನೇಕ ಜನರು ಇದನ್ನು ಪುಡಿ ರೂಪದಲ್ಲಿಯೂ ಬಳಸುತ್ತಾರೆ.
ಜಾಪತ್ರೆ ಆಹಾರಕ್ಕೆ ವಿಭಿನ್ನ ಪರಿಮಳ ನೀಡುತ್ತದೆ.
ಮಾಂಸಾಹಾರಿ ಅಡುಗೆ ಮಾಡುವಾಗ ಜಾಪತ್ರೆ ಹೆಚ್ಚಾಗಿ ಬಳಸುತ್ತಾರೆ. ವೆಜ್ ಪುಲಾವ್, ಸ್ವೀಟ್ ಜರ್ದಾ ಮತ್ತು ವೆಜ್ ಬಿರಿಯಾನಿಗಳಿಗೂ ಸೇರಿಸಲಾಗುತ್ತದೆ.
ವಿವಿಧ ಮಸಾಲೆಗಳಿಂದ ಮಾಡುವ ಯಾವುದೇ ರಾಯಲ್ ಖಾದ್ಯಗಳಿಗೆ ಜಾಪತ್ರೆ ಸೇರಿಸಬಹುದು. ಇದು ವಿಭಿನ್ನ ಪರಿಮಳವನ್ನು ನೀಡುತ್ತದೆ.
4ರಿಂದ 5 ಜನರ ಅಡುಗೆಗೆ, ಇತರ ಮಸಾಲೆಗಳೊಂದಿಗೆ ಒಂದು ಚಿಟಿಕೆ ಜಾಪತ್ರೆ ಹೂ ಮಾತ್ರ ಸೇರಿಸಿ. ಈ ಪ್ರಮಾಣ ಹೆಚ್ಚಾಗಬಾರದು. 15-20 ಜನರಿಗೆ ಅಡುಗೆ ಮಾಡುವಾಗ ಒಂದು ಜಾಪತ್ರೆ ಹೂ ಹಾಕಬಹುದು.
ಹಸಿವು ಕಡಿಮೆಯಾದಾಗ, ಈ ಮಸಾಲೆ ಸೇರಿಸಿದರೆ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತೀರಿ.