ಸಿಲಿಂಡರ್‌ನಲ್ಲಿ ಗ್ಯಾಸ್ ಖಾಲಿಯಾಗಿದೆಯೇ ಎನ್ನುವುದನ್ನು ತಿಳಿಯುವುದು ಹೇಗೆ?

By Jayaraj
Jun 22, 2024

Hindustan Times
Kannada

ಅಡುಗೆಗೆ ಎಲ್‌ಪಿಜಿ ಸಿಲಿಂಡರ್ ಬಳಸುತ್ತೇವೆ. ಬಹುತೇಕ ಹಳ್ಳಿಹಳ್ಳಿಗಳಲ್ಲೂ ಈಗೀಗ ಸಿಲಿಂಡರ್‌ ಬಳಕೆಯಾಗುತ್ತಿದೆ.

ಗ್ಯಾಸ್ ಸಿಲಿಂಡರ್ ಬಳಸುವ ಪ್ರತಿಯೊಬ್ಬರಿಗೂ ಅಡುಗೆ ಮಾಡುವಾಗ ಅದು ಖಾಲಿಯಾಗಬಹುದು ಎಂಬ ಭಯ ಇದ್ದೇ ಇದೆ. 2 ಸಿಲಿಂಡರ್ ಇಲ್ಲದಿದ್ದರೆ, ಅದಕ್ಕೆ ಬದಲಿ ವ್ಯವಸ್ಥೆ ಮಾಡುವುದು ಕಷ್ಟ.

ನೀವು ಕೆಲವು ತಂತ್ರಗಳನ್ನು ಅನುಸರಿಸಿದರೆ, ಸಿಲಿಂಡರ್‌ನಲ್ಲಿ ಅನಿಲ ಖಾಲಿಯಾಗುತ್ತಾ ಬರುವುದನ್ನು ಪತ್ತೆಹಚ್ಚಬಹುದು.

ಸಿಲಿಂಡರ್ ಆರಂಭದಲ್ಲಿ ಬಳಸುವಾಗ ಬೆಂಕಿ ನೀಲಿ ಬಣ್ಣದಲ್ಲಿ ಕಾಣುತ್ತದೆ. ಆದರೆ ಅನಿಲವು ಖಾಲಿಯಾಗುತ್ತಾ ಬರುವಾಗ, ಜ್ವಾಲೆಯು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ.

pixabay

ಗ್ಯಾಸ್ ಸ್ಟೌವ್‌ನ ಜ್ವಾಲೆಯು ನೀಲಿ ಬಣ್ಣಕ್ಕೆ ಬದಲಾಗಿ ಹಳದಿ ಮತ್ತು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಅದು ಸಿಲಿಂಡರ್ ಖಾಲಿಯಾಗುವುದರ ಸಂಕೇತವಾಗಿದೆ.

ನೀವು ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಹೊತ್ತಿಸಿದ ತಕ್ಷಣವೇ ಜ್ವಾಲೆಯಿಂದ ಕಪ್ಪು ಹೊಗೆ ಬರುತ್ತಿದ್ದರೆ, ಸಿಲಿಂಡರ್ ಗ್ಯಾಸ್ ಖಾಲಿಯಾಗಲಿದೆ ಎಂಬುದರ ಸುಳಿವು.

ಸಿಲಿಂಡರ್‌ನಲ್ಲಿ ಗ್ಯಾಸ್ ಖಾಲಿಯಾಗುತ್ತಾ ಬರುವಾಗ, ಅದರ ವಾಸನೆ ಸ್ವಲ್ಪ ಹೆಚ್ಚಾಗುತ್ತದೆ.

ಒದ್ದೆ ಬಟ್ಟೆಯಿಂದ ಸಿಲಿಂಡರ್ ಮೇಲೆ ಪೂರ್ತಿ ಉಜ್ಜಿ ಅದರಲ್ಲಿ ತೇವ ಕಾಣುವಂತೆ ಮಾಡಿ. ಆಗ, ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಇದೆಯೋ ಆ ಭಾಗ ದೀರ್ಘಕಾಲದವರೆಗೆ ತೇವವಾಗಿರುತ್ತದೆ. 

ಈ ಟ್ರಿಕ್ ಮೂಲಕ ನೀವು ಸಿಲಿಂಡರ್‌ನಲ್ಲಿನ ಅನಿಲದ ಪ್ರಮಾಣವನ್ನು ಬೇಗನೆ ಹಾಗೂ ಸುಲಭವಾಗಿ ಅಂದಾಜು ಮಾಡಬಹುದು

JOBS: ಜುಲೈ ಮುಗಿಯುವುದರೊಳಗೆ ಅಪ್ಲೈ ಮಾಡಿ, ಇಲ್ಲಿವೆ ಉದ್ಯೋಗಾವಕಾಶ 

Unsplash