ಅಡುಗೆ ಇನ್ನಷ್ಟು ರುಚಿಕರವಾಗಿಸಲು ಸೂಪರ್ ಟಿಪ್ಸ್

By Jayaraj
Jul 08, 2024

Hindustan Times
Kannada

ಇಂಗು-ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ ಅಂತಾರೆ. ಆದರೆ, ಮಾಡಿದ ಅಡುಗೆ ರುಚಿಕರವಾಗಿರಬೇಕಾದರೆ, ಕೆಲವೊಂದು ಸರಳ ತಂತ್ರಗಳನ್ನು ಅನುಸರಿಸಬೇಕು.

pixa bay

ಇಡ್ಲಿ ಹಿಟ್ಟನ್ನು ಐಸ್ ಕ್ಯೂಬ್‌ ಅಥವಾ ತಂಪಾದ ನೀರಿನೊಂದಿಗೆ ರುಬ್ಬುವುದರಿಂದ ಹಿಟ್ಟು ಬೇಗನೆ ಹುದುಗದಂತೆ ಮಾಡುತ್ತದೆ.

Pexels

ವಿವಿಧ ಬೇಳೆ ಹಾಗೂ ಅಕ್ಕಿ ದೋಸೆಗೆ ಹಿಟ್ಟು ರುಬ್ಬುವಾಗ ಸ್ವಲ್ಪ ಉದ್ದಿನಬೇಳೆ ಮತ್ತು ಕಡಲೆಯನ್ನು ಹಾಕಿದರೆ ರುಚಿಯಷ್ಟೇ ಅಲ್ಲದೆ ಪೌಷ್ಟಿಕವೂ ಹೆಚ್ಚುತ್ತದೆ.

ರಸಂಗೆ ಸ್ವಲ್ಪ ತುಪ್ಪ, ಸಾಸಿವೆ ಹಾಗೂ ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿದರೆ ರಸಂ ಸುವಾಸನೆಯಿಂದ ಕೂಡಿರುತ್ತದೆ.

ಮೊಸರು ವಡಾ ಗಿಟ್ಟಿಗೆ ಸ್ವಲ್ಪ ಉದ್ದಿನ ಬೇಳೆ ಹಾಗೂ ಸ್ವಲ್ಪ ಗೋಡಂಬಿ ಸೇರಿಸಿದರೆ, ಆ ವಡಾ ಗರಿಗರಿಯಾಗಿ ಮತ್ತು ರುಚಿಕರವಾಗಿರುತ್ತದೆ.

ಪನ್ನೀರ್ ಬಟರ್ ಮಸಾಲಾ ಮಾಡುವಾಗ ಶುಂಠಿ ಮತ್ತು ಈರುಳ್ಳಿ ಪೇಸ್ಟ್ ಅನ್ನು ಗೋಡಂಬಿ, ಗಸಗಸೆ ಮತ್ತು ತೆಂಗಿನಕಾಯಿ ರುಬ್ಬಿದ ಪೇಸ್ಟ್‌ಗೆ ಸೇರಿಸಿದರೆ ರುಚಿ ಮತ್ತು ಸುವಾಸನೆ ಚೆನ್ನಾಗಿರುತ್ತದೆ.

ಫ್ರಿಡ್ಜ್‌ನಲ್ಲಿರುವ ಐಸ್ ಕ್ಯೂಬ್ ಟ್ರೇಗೆ ಸ್ವಲ್ಪ ಫ್ರೆಶ್‌ ಹಣ್ಣಿನ ರಸ ಸೇರಿಸಿ. ಅದು ಗಟ್ಟಿಯಾದ ನಂತರ ಮಕ್ಕಳಿಗೆ ಕೊಟ್ಟರೆ ಖುಷಿಪಡುತ್ತಾರೆ.

Pexels

ಯಾವ ದೇವರಿಗೆ ಯಾವ ಹೂವನ್ನು ಅರ್ಪಿಸಬೇಕು?