ನಿದ್ದೆ ಅತಿಯಾದರೂ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ

By Jayaraj
May 08, 2024

Hindustan Times
Kannada

ದೇಹಕ್ಕೆ ನಿದ್ರೆ ತುಂಬಾ ಮುಖ್ಯ. ಹಾಗಂತ ಹೆಚ್ಚು ಹೊತ್ತು ನಿದ್ದೆ ಮಾಡಿದರೆ ದೇಹಕ್ಕೆ ಆರೋಗ್ಯವಲ್ಲ. ವಿಟಮಿನ್ ಕೊರತೆಯು ಅತಿಯಾದ ನಿದ್ರೆಗೆ ಕಾರಣವಾಗುತ್ತದೆ.

Unsplash

ದೇಹಕ್ಕೆ ಜೀವಸತ್ವಗಳು ಬೇಕು. ಇವು ದೇಹಕ್ಕೆ ಅಗತ್ಯ ಪೋಷಕಾಂಶಗಳು. ಇದರ ಕೊರತೆಯು ಅತಿಯಾದ ನಿದ್ರೆಗೆ ಕಾರಣವಾಗುತ್ತದೆ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಾಳುಮಾಡುತ್ತದೆ.

Unsplash

ನಿದ್ದೆ ಹೆಚ್ಚಾದರೆ ಸೋಮಾರಿತನ ಹೆಚ್ಚುತ್ತದೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರಲ್ಲ.

Unsplash

ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಕೊರತೆಯು ಅತಿಯಾದ ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

Unsplash

ವಿಟಮಿನ್ ಡಿ ದೇಹಕ್ಕೆ ಅಗತ್ಯ ಪೋಷಕಾಂಶವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದಾಗಿ, ಅತಿಯಾದ ನಿದ್ರೆ ಬೇಕಾಗುತ್ತದೆ.

Unsplash

ವಿಟಮಿನ್ ಬಿ 12 ಕೊರತೆಯು ಅತಿಯಾದ ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಲ್ಲದೆ ರಕ್ತಹೀನತೆ, ಮಾನಸಿಕ ದೌರ್ಬಲ್ಯ, ಆಯಾಸ ಮತ್ತು ಹೊಟ್ಟೆಯ ಸಮಸ್ಯೆಗಳು ಉಂಟಾಗುತ್ತವೆ.

Unsplash

ಪ್ರತಿದಿನ ಹಾಲು ಕುಡಿಯುವುದರಿಂದ ವಿಟಮಿನ್ ಡಿ ಮತ್ತು ಬಿ12 ಕೊರತೆ ತಡೆಯಬಹುದು. ಹಾಲಿನಲ್ಲಿ ವಿಟಮಿನ್ ಡಿ ಮತ್ತು ಬಿ12 ಸಮೃದ್ಧವಾಗಿದೆ.

Unsplash

ದೇಹದಲ್ಲಿನ ವಿಟಮಿನ್ ಡಿ ಮತ್ತು ಬಿ 12 ಕೊರತೆಗೆ ಚಿಕಿತ್ಸೆ ನೀಡಲು ಸೋಯಾಬೀನ್ ತಿನ್ನಬಹುದು. ಇದು ಪೌಷ್ಟಿಕ ಆಹಾರವಾಗಿದೆ

Unsplash

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva