ಹಾವಿನ ವಿಷದಿಂದ ಮುಂಗುಸಿ ಬಚಾವ್ ಆಗುವುದು ಹೇಗೆ?

By Jayaraj
Jun 10, 2024

Hindustan Times
Kannada

ವಿಷಕಾರಿ ಹಾವು ಕಂಡ್ರೆ ಹೆಚ್ಚಿನವರಿಗೆ ಭಯ. ಇಂಥಾ ಅಪಾಯಕಾರಿ ಹಾವುಗಳ ವಿಷದಿಂದ ದೊಡ್ಡ ಪ್ರಾಣಿಗಳು ಸಹ ಬಲಿಯಾಗುತ್ತವೆ.

ಹಾವು ತುಂಬಾ ವಿಷಕಾರಿ ಜೀವಿಯಾಗಿದ್ದರೂ, ಅದರ ವಿಷ ಮುಂಗುಸಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮುಂಗುಸಿಯು ವಿಶೇಷ ಜೀವಿಯಾಗಿದ್ದು, ಅದು ದೊಡ್ಡ ಹಾವುಗಳ ಮುಂದೆಯೂ ಹೋರಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಸಾಯಿಸಿಯೇ ತನ್ನ ಪ್ರಾಣ ಚೆಲ್ಲುತ್ತದೆ.

ಹಾಗಿದ್ದರೆ ಹಾವಿನ ವಿಷವು ಮುಂಗುಸಿ ಮೇಲೆ ಏಕೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ತಿಳಿಯೋಣ.

ವಯಸ್ಕ ಮುಂಗುಸಿ ದೇಹದಲ್ಲಿ ಅಸೆಟೈಕೋಲಿನ್ ಎಂಬ ಅಂಶ ಕಂಡುಬರುತ್ತದೆ. ಮುಂಗುಸಿಯ ಮೆದುಳಿನಲ್ಲಿ ಈ ಅಂಶ ಇರುತ್ತದೆ.

ಅಸೆಟೈಲ್ಕೋಲಿನ್ ಅಂಶವು ರಕ್ತದಲ್ಲಿ ಕಂಡುಬರುವ ವಿಷದ ನ್ಯೂರೋಟಾಕ್ಸಿಕ್ ಪರಿಣಾಮವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಕಾರಣದಿಂದ, ಹಾವಿನ ವಿಷ ಮುಂಗುಸಿ ಮೇಲೆ ಪರಿಣಾಮ ಬೀರುವುದಿಲ್ಲ.

ಮುಂಗುಸಿ ಮತ್ತು ಹಾವಿನ ನಡುವಿನ ದ್ವೇಷ ಸಹಜ. ಮುಂಗುಸಿಯು ಹಾವನ್ನು ತನ್ನ ಆಹಾರವೆಂದು ಪರಿಗಣಿಸುತ್ತದೆ ಎಂದು ತಜ್ಞರು ನಂಬುತ್ತಾರೆ.

ಮುಂಗುಸಿ ಹಾವುಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ ಎನ್ನುವುದು ಒಂದೆಡೆಯಾದರೆ, ಕೆಲವೊಮ್ಮೆ ತನ್ನ ಅಥವಾ ತನ್ನ ಮಕ್ಕಳ ರಕ್ಷಣೆಗೆ ಹಾವಿನ ಮೇಲೆ ದಾಳಿ ಮಾಡುತ್ತದೆ.

ಭಾರತೀಯ ಬೂದು ಮುಂಗುಸಿಯು ಅತ್ಯಂತ ಅಪಾಯಕಾರಿ ಜಾತಿಯಾಗಿದೆ. ಈ ಮುಂಗುಸಿಯನ್ನು ಹಾವಿನ ಶತ್ರು ಎಂದು ಪರಿಗಣಿಸಲಾಗುತ್ತದೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS