ರೆಡ್‌ಹಾರ್ಟ್‌ ಕಳಿಸುವ ಮೊದಲು ತಿಳ್ಕೊಳಿ, ಈ ದೇಶದಲ್ಲಿ ಹೀಗೆ ಮಾಡಿದ್ರೆ ಜೈಲು ಸೇರಬೇಕಾಗುತ್ತೆ

By Jayaraj
Jul 18, 2024

Hindustan Times
Kannada

ಮೊಬೈಲ್ ಸಂದೇಶ‌ಗಳನ್ನು ಕಳುಹಿಸುವಾಗ ಈಗೀಗ ಅಕ್ಷರಗಳಿಗಿಂತ ಹೆಚ್ಚಾಗಿ ಎಮೋಜಿಗಳೇ ಬಳಕೆಯಾಗುತ್ತಿವೆ.

ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಜನರು ಪರಸ್ಪರ ಮಾತನಾಡುವಾಗ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಹೆಚ್ಚು ಬಳಸುತ್ತಾರೆ.

ಆದರೆ, ಈ ದೇಶದಲ್ಲಿ ನೀವೇನಾದರೂ ಹೃದಯದ ಎಮೋಜಿಯನ್ನು (Red Heart) ನೀವು ಕಳುಹಿಸಿದರೆ ಜೈಲಿಗೆ ಹೋಗಬೇಕಾಗಬಹುದು.

ಸಾಮಾನ್ಯವಾಗಿ ಸಂತೋಷವಾಗಿದ್ದಾಗ ನಗುತ್ತಿರುವ ಎಮೋಜಿ ಕಳುಹಿಸುತ್ತಾರೆ. ದುಃಖವಾಗಿದ್ದಾಗ ಅಳುವ ಅಥವಾ ದುಃಖದ ಎಮೋಜಿ ಕಳುಹಿಸುತ್ತೇವೆ.

ಸಾಮಾನ್ಯವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೃದಯದ ಎಮೋಜಿ ಕಳುಹಿಸುತ್ತಾರೆ. ಕೆಲವೊಮ್ಮೆ ನಮ್ಮವರಿಗೆ ಖುಷಿಯಿಂದ ಈ ಇಮೋಜಿ ಕಳುಹಿಸುತ್ತೇವೆ. ಆದರೆ ಹೃದಯದ ಎಮೋಜಿ ಕಳುಹಿಸಿದರೆ ಜೈಲು ಸೇರಬಹುದಾದ ದೇಶ ಜಗತ್ತಿನಲ್ಲಿದೆ.

ಸೌದಿ ಅರೇಬಿಯಾ: ಇಸ್ಲಾಮಿಕ್ ದೇಶ ಸೌದಿ ಅರೇಬಿಯಾದಲ್ಲಿ ಕಾನೂನು ತುಂಬಾ ಬಿಗಿಯಾಗಿದೆ. ಸೌದಿ ಅರೇಬಿಯಾದಲ್ಲಿ ರೆಡ್ ಹಾರ್ಟ್ ಎಮೋಜಿಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕಾನೂನು ಇದೆ.

ಸೌದಿಯಲ್ಲಿ ಯಾರಾದರೂ ಕೆಂಪು ಹೃದಯದ ಎಮೋಜಿಯನ್ನು ಯಾರಿಗಾದರೂ ಕಳುಹಿಸಿ, ಆ ವ್ಯಕ್ತಿ ಅದರ ಬಗ್ಗೆ ಏನಾದರೂ ದೂರು ನೀಡಿದರೆ, ಅದಕ್ಕೆ ಶಿಕ್ಷೆ ಇದೆ.

ಸೌದಿ ಅರೇಬಿಯಾದಲ್ಲಿ ಅನುಮತಿಯಿಲ್ಲದೆ ಹೃದಯದ ಎಮೋಜಿ ಕಳುಹಿಸಿದರೆ ಸುಮಾರು 20 ಲಕ್ಷ ರೂಪಾಯಿ ದಂಡ ಮತ್ತು 2ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು