ಯಶಸ್ವಿ ಉದ್ಯೋಗಿ ಎನಿಸಿಕೊಳ್ಳಲು ನಿಮ್ಮಲ್ಲಿ ಈ ಅಭ್ಯಾಸಗಳಿರಬೇಕು

By Jayaraj
Jun 10, 2024

Hindustan Times
Kannada

ಯಶಸ್ವಿ ಉದ್ಯೋಗಿ ಎನಿಸಿಕೊಳ್ಳಲು ಒಳ್ಳೆಯ ಸಂಬಳವಿದ್ದರೆ ಸಾಲುವುದಿಲ್ಲ. ಅವರಲ್ಲಿ ಕೆಲವು ಸಾಮಾನ್ಯ ಗುಣ ಅಥವಾ ಅಭ್ಯಾಸಗಳಿರಬೇಕು. ಆಗ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲು ಸಾಧ್ಯ.

ಯಶಸ್ವಿ ಉದ್ಯೋಗಿಯ ಸಾಮಾನ್ಯ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ.

ಸಮಯಪಾಲನೆ: ಕೆಲಸದಲ್ಲಿ ಯಶಸ್ವಿಯಾಗಿರುವ ಉದ್ಯೋಗಿಗಳು ಸಮಯಕ್ಕೆ ಆದ್ಯತೆ ನೀಡುತ್ತಾರೆ. ಕೆಲಸ, ಮೀಟಿಂಗ್‌ ಹೀಗೆ ಏನೇ ಇದ್ದರೂ ಸಮಯಕ್ಕೆ ಸರಿಯಾಗಿ ಮಾಡುತ್ತಾರೆ.

ಗುರಿ ನಿರ್ಧಾರ: ಯಶಸ್ವಿ ಉದ್ಯೋಗಿಗಳು ಸ್ಪಷ್ಟ ಹಾಗೂ ಸಾಧಿಸಬೇಕಾದ ಗುರಿ ನಿರ್ಧಿಸಿರುತ್ತಾರೆ. ಅದಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಆಗ ಏಕಾಗ್ರತೆಯಿಂದ ಕೆಲಸ ಸಾಗುತ್ತದೆ.

ಉತ್ತಮ ಸಂವಹನ ಕೌಶಲ್ಯ: ಕೆಲಸದ ಸ್ಥಳದಲ್ಲಿ ಯಶಸ್ವಿಯಾಗಲು ಸಹೋದ್ಯೋಗಿಗಳು ಸೇರಿದಂತೆ ಎಲ್ಲರೊಂದಿಗೂ ಉತ್ತಮ ಸಂವಹನ ಅಗತ್ಯ. ಮಾತನಾಡುವಾಗ ಸ್ಪಷ್ಟ ಮತ್ತು ವೃತ್ತಿಪರತೆ ಕಾಣಬೇಕು.

ಸಮಯ ನಿರ್ವಹಣೆ: ಯಶಸ್ವಿ ಉದ್ಯೋಗಿಗಳು ತಮ್ಮ ಸಮಯವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ತಮ್ಮ ಕೆಲಸಗಳಿಗೆ ಆದ್ಯತೆ ನೀಡುತ್ತಾರೆ. ಕೆಲಸ ಮುಂದೂಡದೆ ಅನಗತ್ಯ ಗೊಂದಲ ತಪ್ಪಿಸುತ್ತಾರೆ.

ನಿರಂತರ ಕಲಿಕೆ: ಯಶಸ್ವಿ ಉದ್ಯೋಗಿಯಾಗಬೇಕೆಂದರೆ ಕಲಿಕೆ ನಿರಂತರವಾಗಿರಬೇಕು. ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳಲು ಬಯಸಬೇಕು.

ಧನಾತ್ಮಕ ಯೋಚನೆ, ಹೊಂದಿಕೊಳ್ಳುವ ಸ್ವಭಾವ: ಯಶಸ್ವಿ ಉದ್ಯೋಗಿ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾರೆ. ಸಮಸ್ಯೆ ಪರಿಹರಿಸುವಾಗ, ಹೊಸ ಜವಾಬ್ದಾರಿ ತೆಗೆದುಕೊಳ್ಳುವಾಗ ಸಕಾರಾತ್ಮಕ ಮನೋಭಾವ ಹೊಂದಿರುತ್ತಾರೆ.

ಟೀಮ್‌ ಪ್ಲೇಯರ್: ಯಶಸ್ವಿ ಉದ್ಯೋಗಿಗಳು ಸ್ವತಂತ್ರವಾಗಿ ಕೆಲಸ ಮಾಡುವುದಲ್ಲದೆ, ತಮ್ಮ ಗುರಿ ಸಾಧನೆಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ.

All photos: Pexels

ಉಯ್ಯಾಲೆಯಾಡಿದ ಕೆಎಲ್ ರಾಹುಲ್; ಸ್ಪೇನ್​ನಲ್ಲಿ ಸಖತ್ ಸುತ್ತಾಟ