ಬಿಳಿ ಅಕ್ಕಿ vs ಕೆಂಪಕ್ಕಿ: ನಿಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು

By Jayaraj
Jun 10, 2024

Hindustan Times
Kannada

ಭಾರತೀಯರ ಆಹಾರದಲ್ಲಿ ಅನ್ನಕ್ಕೆ ವಿಶೇಷ ಸ್ಥಾನ. ಅದರಲ್ಲೂ ದಕ್ಷಿಣ ಭಾರತೀಯರಿಗೆ ನಿತ್ಯ ಅನ್ನ ಬೇಕೇ ಬೇಕು.

ವಿವಿಧ ಬಗೆಯ ಅಕ್ಕಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಿಳಿ ಮತ್ತು ಕೆಂಪು ಅಕ್ಕಿ (ಬ್ರೌನ್‌ ರೈಸ್‌) ಹೆಚ್ಚು ಬಳಕೆಯಲ್ಲಿದೆ.

ಬಿಳಿ ಅಕ್ಕಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇನ್ನೂ ಕೆಲವರು ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಂಪಕ್ಕಿಯನ್ನು ಸೇವಿಸುತ್ತಾರೆ.

ಬಿಳಿ ಅಕ್ಕಿ ಮತ್ತು ಕೆಂಪಕ್ಕಿ ನಡುವೆ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.

ಕೆಂಪಕ್ಕಿಯಲ್ಲಿ, ಅದರ ಮೇಲಿನ ಪದರ ಹಾಗೆಯೇ ಇರುತ್ತದೆ. ಇದರಲ್ಲಿ ಫೈಬರ್‌ ಅಂಶವಿರುತ್ತದೆ. ಅಂದರೆ, ಬಿಳಿ ಅಕ್ಕಿಗಿಂತ ಹೆಚ್ಚು ಫೈಬರ್ ಬ್ರೌನ್‌ ರೈಸ್‌ನಲ್ಲಿದೆ.

ಬಿಳಿ ಅಕ್ಕಿಗೆ ಹೋಲಿಸಿದರೆ, ಕಂದು ಅಕ್ಕಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ. ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕದಿಂದಾಗಿ ರಕ್ತದಲ್ಲಿನ ಸಕ್ಕರೆಯು ವೇಗವಾಗಿ ಹೆಚ್ಚಾಗುತ್ತದೆ.

ಕೆಂಪಕ್ಕಿಯ ಮೇಲಿನ ಪದರದಲ್ಲಿ ಫೈಬರ್ ಮಾತ್ರವಲ್ಲದೆ ಮೆಗ್ನೀಸಿಯಮ್, ರಂಜಕ ಮತ್ತು ಅನೇಕ ಜೀವಸತ್ವಗಳು ಇರುತ್ತವೆ.

ಬಿಳಿ ಅಕ್ಕಿ ಹಗುರವಾಗಿರುತ್ತದೆ. ಆದರೆ ಕೆಂಪಕ್ಕಿ ತೂಕ ಹೆಚ್ಚು. ಜೀರ್ಣಕ್ರಿಯೆ  ದುರ್ಬಲವಾಗಿರುವವರಿಗೆ ಬಿಳಿ ಅಕ್ಕಿ ಉತ್ತಮ.

ಬ್ರೌನ್ ರೈಸ್ ತೂಕ ನಷ್ಟಕ್ಕೆ ಪ್ರಯೋಜನಕಾರಿಯಾದರೆ, ಬಿಳಿ ಅಕ್ಕಿ ತೂಕ ಹೆಚ್ಚಿಸಲು ಸಹಕಾರಿ.

ಈ ಮಾಹಿತಿ ವಿವಿಧ ಮೂಲಗಳನ್ನು ಆಧರಿಸಿದೆ. ಸೇವಿಸುವ ಮೊದಲು ತಜ್ಞರಿಂದ ಸೂಕ್ತ ಸಲಹೆ ಪಡೆಯಿರಿ.

ಸಂಜೆ ಮಳೆಯ ಖುಷಿ ಹೆಚ್ಚಿಸುವ ಗರಿಗರಿ ಪಕೋಡ ಹೀಗೆ ಮನೆಯಲ್ಲೇ ತಯಾರಿಸಿ ಸವಿಯಿರಿ