ಆಷಾಢದ ಮೆರುಗು ಹೆಚ್ಚಿಸುವ ಹಸಿರು ಸೀರೆಗಳಿವು

By Jayaraj
Jul 11, 2024

Hindustan Times
Kannada

ಹೆಣ್ಮಕ್ಕಳಿಗೆ ಸೀರೆಯೆಂದರೆ ಪ್ರೀತಿ. ಅದರಲ್ಲೂ ಹಸಿರು ಸೀರೆಯೆಂದರೆ ಬಲು ಇಷ್ಟ. ಆಷಾಢ ಬಂದಿದ್ದು, ಮಾಸದ ಮೆರುಗು ದುಪ್ಪಟ್ಟಾಗಿಸುವ ಟ್ರೆಂಡೀ ಸೀರೆಗಳನ್ನು ನೋಡೋಣ.

ರಫಲ್ ಸೀರೆ: ಆಷಾಢದಲ್ಲಿ ಹಸಿರು ಬಣ್ಣದ ರಫಲ್ ಸೀರೆ ಧರಿಸಬಹುದು. ಇದು ಉಡಲು ಹಗುರವಾಗಿರುತ್ತವೆ ಮತ್ತು ಆಕರ್ಷಕವಾಗಿ ಕಾಣುತ್ತವೆ.

ನೆಟ್ ಗ್ರೀನ್ ಸೀರೆ: ಈ ಚಿತ್ರದಲ್ಲಿ ಗಿಳಿ ಹಸಿರು ಬಣ್ಣದ ನೆಟ್ ಸೀರೆ ಉಟ್ಟು ಮೌನಿ ರಾಯ್ ಸುಂದರವಾಗಿ ಕಾಣುತ್ತಾರೆ. ಇಂಥಾ ಸೀರೆ ಆಷಾಢಕ್ಕೆ ಒಪ್ಪುತ್ತದೆ.

ಚಿಕಂಕರಿ ಸೀರೆ: ಚಿಕಂಕರಿ ಶೈಲಿಯ ಹಸಿರು ಸೀರೆಯು ಆಷಾಢದಲ್ಲಿ ಉಡಬಹುದು. ಈ ರೀತಿಯ ಸೀರೆಯು ಸುಂದರ ನೋಟವನ್ನು ನೀಡುತ್ತದೆ.

ಫೆದರ್ ಸೀರೆ: ಫೆದರ್ ಸ್ಟೈಲ್ ನೆಟ್ ಗ್ರೀನ್ ಸೀರೆ ಟ್ರೆಂಡಿ ಲುಕ್‌ ಕೊಡುತ್ತದೆ. ಹೊಸ ವಿನ್ಯಾಸದ ಸೀರೆಗಳು ಸುಂದರ ನೋಟವನ್ನು ನೀಡುತ್ತವೆ.

ಬುಟಿ ಪ್ರಿಂಟ್ ಸೀರೆ: ನೋರಾ ಫತೇಹಿ ಮರಾಠಿ ಲುಕ್‌ನ ಹಸಿರು ಬುಟಿ ಪ್ರಿಂಟ್ ಸೀರೆ ಧರಿಸಿದ್ದಾರೆ. ಇದಕ್ಕೆ ತಿಳಿ ಹಸಿರು ಬಣ್ಣದ ಪೂರ್ಣ ತೋಳಿನ ಕುಪ್ಪಸ ಧರಿಸಿದ್ದಾರೆ.

ರೇಷ್ಮೆ ಸೀರೆ: ಸ್ಲೀವ್‌ಲೆಸ್ ಬ್ಲೌಸ್‌ನೊಂದಿಗೆ ತಿಳಿ ಹಸಿರು ರೇಷ್ಮೆ ಸೀರೆ ಆಷಾಢದ ಶುಭಕಾರ್ಯಕ್ಕೆ ಸುಂದರವಾಗಿ ಕಾಣುತ್ತವೆ.

ಪ್ಲೇನ್‌ ಸೀರೆ: ತಿಳಿ ಬಣ್ಣದ ಸಿಂಪಲ್‌ ಸೀರೆಗಳನ್ನು ಇಷ್ಟಪಡುವವರಿಗೆ ಪ್ಲೇನ್ ಸೀರೆ ಉತ್ತಮವಾಗಿ ಕಾಣುತ್ತದೆ.

ಬಾರ್ಡರ್ ಸೀರೆ: ಕತ್ರಿನಾ ಕೈಫ್‌ ಸಿಲ್ವರ್ ಬಾರ್ಡರ್ ಇರುವ ಹಸಿರು ಬಣ್ಣದ ಸೀರೆ ಧರಿಸಿದ್ದಾರೆ. ಪಾರ್ಟಿ ಲುಕ್‌ಗೆ ಇದು ಉತ್ತಮ.

All photos: Instagram

ಮಾದಕ ಚೆಲುವೆ ಶಾಲಿನಿ ಪಾಂಡೆ  ಫೋಟೋಶೂಟ್‌