ಮನೆಯಲ್ಲೇ ಕುಳಿತು ಮಾಡಬಹುದಾದ 7 ಪಾರ್ಟ್ ಟೈಮ್ ಕೆಲಸಗಳು

By Jayaraj
Oct 07, 2024

Hindustan Times
Kannada

ದಿನಕಳೆದಂತೆ ಖರ್ಚುಗಳು ಹೆಚ್ಚುತ್ತವೆ. ಕೌಟುಂಂಬಿಕ ಬದುಕಿನಲ್ಲಿ ಜವಾಬ್ದಾರಿಗಳು ಹೆಚ್ಚಿದಂತೆ ಹಣದ ಸಮಸ್ಯೆಗಳು ಕಾಡುತ್ತವೆ.

ಇಂಥಾ ಸಮಯದಲ್ಲಿ ಮನೆಯಲ್ಲಿ ಬಿಡುವಾದಾಗ ಏನಾದರೂ ಕೆಲಸ ಮಾಡಬಹುದು. ಅದರೊಂದಿಗೆ ಮಾಡುವ ಕೆಲಸಕ್ಕೂ ಸಂಬಳವೂ ಪಡೆಯಬಹುದು.

ಕಂಟೆಂಟ್ ರೈಟಿಂಗ್: ಬರವಣಿಗೆ ಸಾಮರ್ಥ್ಯ ನಿಮ್ಮಲ್ಲಿದ್ದರೆ ಈ ಕೆಲಸವೂ ಮಾಡಬಹುದು. ವರ್ಡ್‌ಪ್ರೆಸ್‌ ಮತ್ತು ಮೀಡಿಯಂ ವೇದಿಕೆಗಳಲ್ಲೂ ಕಂಟೆಂಟ್‌ ಬರೆದುಕೊಡಬಹುದು.

ಫ್ರೀಲ್ಯಾನ್ಸಿಂಗ್:‌ ನಿಮ್ಮ ಕೌಶಲ್ಯ ಮತ್ತು ವಿದ್ಯಾರ್ಹತೆಗೆ ಅನುಸಾರವಾಗಿ ಫ್ರೀಲ್ಯಾನ್ಸಿಂಗ್‌ ಮಾಡಬಹುದು. ಫ್ರೀಲ್ಯಾನ್ಸರ್‌, ಫಿವರ್‌ ಮತ್ತು ಅಪ್‌ವರ್ಕ್‌ನಲ್ಲಿ ಅವಕಾಶಗಳಿವೆ.

ಆನ್‌ಲೈನ್‌ ಟ್ಯೂಷನ್‌: ವೇದಾಂತು, ಟ್ಯುಟೋರ್‌ಮಿ, ಚೆಗ್‌ ಇಂತಹ ವೆಬ್‌ಸೈಟ್‌ಗಳು ವಿದ್ಯಾರ್ಥಿಗಳಿಗೆ ಟೀಚಿಂಗ್‌ ಅವಕಾಶ ನೀಡುತ್ತವೆ. ನಿಮ್ಮ ಜ್ಞಾನಕ್ಕೆ ಅನುಗಣವಾಗಿ ತರಗತಿ ಮಾಡಬಹುದು.

ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್: ನಿಮಗೆ ಸಾಮಾಜಿಕ ಮಾಧ್ಯಮ ಜಾನವಿದ್ದರೆ ಕೆಲವು ವೃತ್ತಿಪರರ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಹ್ಯಾಂಡಲ್‌ ಮಾಡಬಹುದು.

ಯೂಟ್ಯೂಬ್‌ ಇನ್‌ಫ್ಲ್ಯುಯೆನ್ಸರ್: ನಿಮ್ಮದೇ ವಿಡಿಯೋ ಕಂಟೆಂಟ್‌ ಮಾಡುವ ಕೌಶಲ್ಯವಿದ್ದರೆ, ಯೂಟ್ಯೂಬ್‌ ಮೂಲಕ ಹಣ ಗಳಿಸಬಹುದು.

ವೆಬ್‌‌ಡಿಸೈನಿಂಗ್: ನಿಮಗೆ ವೆಬ್ ಡಿಸೈನಿಂಗ್ ಜ್ಞಾನವಿದ್ದರೆ; ವರ್ಡ್‌ಪ್ರೆಸ್, ವಿಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಬಿಸಿನೆಸ್‌ ಪ್ರಾಜೆಕ್ಟ್‌ ಮಾಡಬಹುದು.

ಆನ್‌ಲೈನ್‌ ಸರ್ವೇ: ಸರ್ವೇ ಜಂಕೀ, ಸ್ವಾಗ್‌ಬಕ್ಸ್‌ ಮೊದಲಾದ ವೆಬ್‌ಸೈಟ್‌ಗಳು ಸರ್ವೇ ಪೂರ್ಣಗೊಳಿಸದರೆ ಪಾವತಿ ಮಾಡುತ್ತವೆ. ಇದರಲ್ಲೂ ಹಣ ಗಳಿಸಬಹುದು

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS