ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ಗಳು ಯಥೇಚ್ಛವಾಗಿರುತ್ತದೆ. ಇದು ನಿಮ್ಮ ದೈನಂದಿನ ಆಹಾರಕ್ರಮಕ್ಕೆ ಹೆಚ್ಚುವರಿ ಪೌಷ್ಟಿಕಾಂಶ ಕೊಡುತ್ತದೆ.
ಪ್ರತಿದಿನ ಬಾಳೆಹಣ್ಣು ತಿಂದರೆ ಆರೋಗ್ಯ ಭಾಗ್ಯ ನಿಮ್ಮದು ಎನ್ನಲು ಈ ಅಂಶಗಳು ಸಾಕು.
ಬಾಳೆಹಣ್ಣಿನಲ್ಲಿರುವ ವಿಟಮಿನ್ B6 ಅನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ. ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ನಿಮ್ಮ ದೈನಂದಿನ ಅಗತ್ಯದ ಸುಮಾರು 25 ಶೇ ವಿಟಮಿನ್ ಇರುತ್ತದೆ.
ಬಾಳೆಹಣ್ಣಿಗೂ ವಿಟಮಿನ್ 'ಸಿ'ಗೂ ಸಂಬಂಧವಿಲ್ಲ. ಆದರೂ, ಮಧ್ಯಮ ಗಾತ್ರದ ಬಾಳೆಹಣ್ಣು ನಿಮ್ಮ ದೈನಂದಿನ ವಿಟಮಿನ್ ಸಿ ಅವಶ್ಯಕತೆಗಳಲ್ಲಿ ಸುಮಾರು 10 ಪ್ರತಿಶತ ಪೂರೈಸುತ್ತದೆ.
ಮಧ್ಯಮ ಗಾತ್ರದ ಒಂದು ಬಾಳೆಹಣ್ಣು ದೈನಂದಿನ ಅಗತ್ಯದ ಸುಮಾರು 13 ಶೇ ಮ್ಯಾಂಗನೀಸ್ ಅನ್ನು ದೇಹಕ್ಕೆ ನೀಡುತ್ತದೆ. ಇದು ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಜೊತೆಗೆ ಜೀವಕೋಶಗಳನ್ನು ರಕ್ಷಿಸುತ್ತದೆ.
ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸರಿಸುಮಾರು 320-400 ಮಿ.ಗ್ರಾಂ ಪೊಟ್ಯಾಸಿಯಮ್ ಇರುತ್ತದೆ. ಇದು ನಿಮ್ಮ ದೈನಂದಿನ ಅವಶ್ಯಕತೆಯ ಸುಮಾರು 10 ಶೇಕಡವನ್ನು ಪೂರೈಸುತ್ತದೆ.
ಬಾಳೆಹಣ್ಣು ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲದಂತೆ ಮೂರು ಸಕ್ಕರೆಗಳಾದ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನೊಂದಿಗೆ ನೈಸರ್ಗಿಕ ಶಕ್ತಿಯ ವರ್ಧಕವನ್ನು ದೇಹಕ್ಕೆ ನೀಡುತ್ತವೆ.