ಮನುಷ್ಯರಂತೆ ಪ್ರಾಣಿಗಳಿಗೂ ಮಲಗಿದಾಗ ಕನಸು ಬೀಳುತ್ತಾ?

By Jayaraj
Sep 25, 2024

Hindustan Times
Kannada

ಮನುಷ್ಯರು ಗಾಢ ನಿದ್ರೆಯಲ್ಲಿರುವಾಗ ಕನಸುಗಳು ಬೀಳುತ್ತವೆ. ಒಳ್ಳೆಯ ಕನಸು, ಕೆಲವೊಮ್ಮೆ ಕೆಟ್ಟ ಕನಸು ಕಾಣುವುದಿದೆ.

ಹಾಗಿದ್ದರೆ, ಮನುಷ್ಯನನ್ನು ಹೊರತುಪಡಿಸಿ ಪ್ರಾಣಿಗಳು ಮಲಗುವಾಗ ಕನಸು ಕಾಣುತ್ತವೆಯೇ ಎಂಬುದು ಹಲವರ ಪ್ರಶ್ನೆ.

ವಿಜ್ಞಾನದ ಪ್ರಕಾರ, ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಕೂಡಾ ನಿದ್ರೆಯಲ್ಲಿ ಕನಸು ಕಾಣುತ್ತವೆ. ಪ್ರಾಣಿಗಳು ನಿದ್ರಾವಸ್ಥೆಯಲ್ಲಿದ್ದಾಗ ದೇಹದ ಚಲನೆಯಿಂದ ಇದು ಸ್ಪಷ್ಟವಾಗುತ್ತದೆ.

ಮನೆಯಲ್ಲಿ ನಾಯಿ, ಬೆಕ್ಕಿನಂತಹ ಸಾಕುಪ್ರಾಣಿಗಳು ಇದ್ದರೆ, ನಿಮಗೆ ಈ ಅನುಭವ ಆಗಿರಬಹುದು. ಮಲಗಿರುವಾಗ ಪ್ರಾಣಿಗಳು ಸದ್ದು ಮಾಡುವುದು, ಕೈ-ಕಾಲುಗಳನ್ನು ಅಲ್ಲಾಡಿಸುವುದನ್ನು ನೀವು ನೋಡಿರಬಹುದು.

ನಿದ್ದೆಯಲ್ಲಿ ನಾಯಿ ಕನಸು ಕಂಡರೆ, ಅದು ಕೂಗಲು ಪ್ರಾರಂಭಿಸುತ್ತದೆ. ಬೆಕ್ಕು ಕೂಡಾ ಸದ್ದು ಮಾಡುತ್ತದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಪ್ರಾಣಿಗಳು ನಿದ್ರೆಯ ಸಮಯದಲ್ಲಿ ಕನಸು ಕಾಣುತ್ತವೆ ಎಂದು ಕಂಡುಹಿಡಿದಿದ್ದಾರೆ.

ಪ್ರಾಣಿಗಳು ಕೂಡಾ ಒಳ್ಳಯ ಕನಸಿನಂತೆ ಭಯಾನಕ ಕನಸುಗಳನ್ನುಕಾಣುತ್ತವೆ. ಕೆಲವೊಮ್ಮೆ ನಿದ್ದೆಯಿಂದ ಪ್ರಾಣಿಗಳು ಭಯದಿಂದ ಥಟ್ಟನೆ ಏಳುತ್ತವೆ.

ತಜ್ಞರು ಇಇಜಿ ಪರೀಕ್ಷೆ (electroencephalogram) ಮೂಲಕ ಪ್ರಾಣಿಗಳ ಮೆದುಳನ್ನು ಪರೀಕ್ಷಿಸುತ್ತಾರೆ. ಈ ಪರೀಕ್ಷೆಯು ಪ್ರಾಣಿಗಳ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ.

ಪ್ರಾಣಿಗಳ ಮೆದುಳಿನ ರಚನೆ ವಿಭಿನ್ನ. ಕೆಲವು ಪ್ರಾಣಿಗಳು 20 ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರಿಸುತ್ತವೆ. ಡಾಲ್ಫಿನ್‌ಗಳು ಕಣ್ಣುಗಳನ್ನು ತೆರೆದು ಮಲಗುತ್ತವೆ.

ಎಲ್ಲಾ ಪ್ರಾಣಿಗಳು ನಿದ್ರೆಯ ಸಮಯದಲ್ಲಿ ಕನಸು ಕಾಣುತ್ತವೆ ಎಂದು ಹೇಳುವುದು ಸರಿಯಲ್ಲ. ಪ್ರಾಣಿಗಳ ಕನಸಿನ ವಿಷಯ ಮತ್ತು ಅವಧಿಯು ಮಾನವ ಕನಸುಗಳಿಂದ ಭಿನ್ನವಾಗಿರುತ್ತವೆ.

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!