ಚಳಿಗಾಲದಲ್ಲೂ ಸನ್‌ಸ್ಕ್ರೀನ್ ಹಚ್ಚಬೇಕೇ?
By Jayaraj
Nov 28, 2024
Hindustan Times
Kannada
ಸೂರ್ಯನಿಂದ ರಕ್ಷಣೆ ಪಡೆಯಲು ಸನ್‌ಸ್ಕ್ರೀನ್ ತ್ವಚೆಯ ಆರೈಕೆಯ ಪ್ರಮುಖ ಭಾಗವಾಗಿದೆ. ಇದು ಚರ್ಮವನ್ನು ರಕ್ಷಿಸುತ್ತದೆ.
ಚಳಿಗಾಲದಲ್ಲಿಯೂ ಸಾಮಾನ್ಯವಾಗಿ ಬಿಸಿಲಿನಲ್ಲಿ ಓಡಾಟ ಮಾಡಬೇಕಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಹಚ್ಚಬೇಕೇ, ಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಚಳಿಗಾಲದಲ್ಲಿ ಸೂರ್ಯನ ಬೆಳಕು ಸೌಮ್ಯವಾಗಿದ್ದರೂ, UV ಕಿರಣಗಳು ಚರ್ಮಕ್ಕೆ ಹಾನಿಕಾರಕವಾಗಿರುತ್ತವೆ.
UV-A ಮತ್ತು UV-B ಕಿರಣಗಳು ಚರ್ಮದ ಮೇಲಿನ ಪದರದ ಮೇಲೆ ಪರಿಣಾಮ ಬೀರುತ್ತವೆ. ಇದು ಸನ್‌ಬರ್ನ್ ಅಪಾಯ ಉಂಟುಮಾಡುತ್ತದೆ.
ಹೀಗಾಗಿ ಚಳಿಗಾಲದಲ್ಲಿಯೂ ಸನ್‌ಸ್ಕ್ರೀನ್ ಹಚ್ಚುವುದು ಮುಖ್ಯ. ಮನೆಯ ಹೊರಗೆ ಹೋಗುವಾಗ ಎರಡರಿಂದ ಮೂರು ಬಾರಿ ಹಚ್ಚಬಹುದು.
ಸನ್‌ಸ್ಕ್ರೀನ್ ಅನ್ವಯಿಸುವ ಮೊದಲು ಚರ್ಮವನ್ನು ತೇವಗೊಳಿಸುವುದನ್ನು ಮರೆಯಬೇಡಿ. ಮಾಯಿಶ್ಚರೈಸ್ ಮಾಡಿದ ನಂತರ ಬಳಸಿ.
ಸನ್‌ಸ್ಕ್ರೀನ್ ಅನ್ನು SPF 30 ಅಥವಾ ಅದಕ್ಕಿಂತ ಹೆಚ್ಚು ಬಳಸಬೇಕು. ಇದು UVA ಮತ್ತು UVB ಎರಡರಿಂದಲೂ ರಕ್ಷಿಸುತ್ತದೆ.
ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ನಿಮ್ಮ ಸೌಂದರ್ಯ ದಿನಚರಿಯಲ್ಲಿ ಬದಲಾವಣೆ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ