ಈ 5 ವಿಷ್ಯ ತಿಳ್ಕೊಂಡ್ರೆ ಬಾಳೆಹಣ್ಣು 7 ದಿನ ಫ್ರೆಶ್ ಇರುತ್ತೆ
By Jayaraj
Sep 07, 2024
Hindustan Times
Kannada
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಉಪಯುಕ್ತ. ಬಹುತೇಕ ಪ್ರತಿಯೊಬ್ಬರೂ ಈ ಸಿಹಿಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ.
ಬಾಳೆಹಣ್ಣು ಸಾಮಾನ್ಯವಾಗಿ 2ರಿಂದ 3 ದಿನಗಳಲ್ಲಿ ಹಾಳಾಗಲು ಆರಂಭವಾಗುತ್ತದೆ. ಮಾರುಕಟ್ಟೆಯಿಂದ ಎಷ್ಟೇ ಒಳ್ಳೆಯ ಹಣ್ಣನ್ನು ತಂದರೂ ಅದು ಬಹುಬೇಗ ಕೊಳೆಯಲು ಆರಂಭಿಸುತ್ತದೆ.
ಕೆಲವೊಂದು ಬಾರಿ ಬಾಳೆಹಣ್ಣು ಹಾಳಾಗದಿದ್ದರೂ ಅದರ ಸಿಪ್ಪೆ ಬೇಗನೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ವಾರವಿಡೀ ಬಾಳೆಹಣ್ಣನ್ನು ತಾಜಾವಾಗಿ ಇರಿಸಿಕೊಳ್ಳಬಹುದು. ಅದಕ್ಕೆ ನಿಮಗೆ ಭಿನ್ನ ಮಾರ್ಗಗಳನ್ನು ಹೇಳುತ್ತೇವೆ ನೋಡಿ.
ಬಾಳೆಗೊನೆಯ ಮೇಲಿನ ಭಾಗಕ್ಕೆ ಮನೆಯಲ್ಲಿ ಆಹಾರವನ್ನು ಕಟ್ಟಲು ಬಳಸುವ ಪ್ಲಾಸ್ಟಿಕ್‌ನಿಂದ ಸುತ್ತಿ ಇಡಿ. ಈ ರೀತಿ ಮಾಡುವುದರಿಂದ ಬಾಳೆಹಣ್ಣು ದೀರ್ಘಕಾಲ ತಾಜಾವಾಗಿರುತ್ತದೆ.
ಹಣ್ಣುಗಳನ್ನು ದೀರ್ಘಕಾಲ ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವವರು ಹೆಚ್ಚು. ಆದರೆ, ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಬೇಕು.
ಬಾಳೆಹಣ್ಣನ್ನು ನೆಲ ಸೇರಿದಂತೆ ಮೇಲ್ಮೈ ಮೇಲೆ ಇರಿಸಿದರೆ ಕೆಡುವ ಸಾಧ್ಯತೆ ಹೆಚ್ಚು. ಹೀಗಾಗಿ ಬಾಳೆಗೊನೆಯನ್ನು ಯಾವಾಗಲೂ ನೇತುಹಾಕಿ.
ವಿಟಮಿನ್ ಸಿ ಟ್ಯಾಬ್ಲೆಟ್ ಅನ್ನು ನೀರಿನಲ್ಲಿ ಕರಗಿಸಿ ಅದರಲ್ಲಿ ಬಾಳೆಹಣ್ಣನ್ನು ಅದ್ದಿ ಹೊರತೆಗೆಯಿರಿ. ಇದರಿಂದ ಹಣ್ಣು ದೀರ್ಘಕಾಲ ತಾಜಾವಾಗಿರುತ್ತದೆ.
ಎಲ್ಲಾ ಹಣ್ಣುಗಳನ್ನು ಒಂದೇ ಬುಟ್ಟಿಯಲ್ಲಿ ಇಡುವ ಬದಲು, ಬಾಳೆಹಣ್ಣನ್ನು ಇತರ ಹಣ್ಣುಗಳಿಂದ ಪ್ರತ್ಯೇಕವಾಗಿ ಇರಿಸಬೇಕು.
All Photos: Pexels
ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೃಷ್ಣ ಸುಂದರಿ ಭೂಮಿ ಶೆಟ್ಟಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ