ಈ ಪ್ರಶ್ನೆ ನಿಮ್ಮಲ್ಲೂ ಮೂಡಿದೆಯಾ? ಪುಸ್ತಕ ಏಕೆ ಚಚ್ಚೌಕವಾಗಿಯೇ ಇರುತ್ತದೆ?
By Jayaraj
Sep 16, 2024
Hindustan Times
Kannada
ಮನುಷ್ಯ ಜೀವನದಲ್ಲಿ ಪುಸ್ತಕ ಮಹತ್ವದ ಪಾತ್ರ ವಹಿಸುತ್ತವೆ. ಜ್ಞಾನ ವೃದ್ಧಿಸುವ ಪ್ರಮುಖ ಸಂಪನ್ಮೂಲವಿದು
ಪುಸ್ತಕಗಳನ್ನು ಓದುವ ಹವ್ಯಾಸ ಅನೇಕ ಜನರಿಗೆ ಇರುತ್ತದೆ. ಇದು ಸಮಯದ ಸದುಪಯೋಗಕ್ಕೆ ನೆರವಾಗುತ್ತದೆ.
ಪುಸ್ತಕಗಳನ್ನು ಓದುವಾಗ ನಿಮಗೂ ಈ ಪ್ರಶ್ನೆ ಬಂದಿರಬಹುದು. ಪ್ರತಿ ಪುಸ್ತಕಗಳ ಆಕಾರವು ಚೌಕ ಅಥವಾ ಆಯತಾಕಾರದಲ್ಲೇ ಇರುತ್ತದೆ.
ಪುಸ್ತಕವು ಚೌಕಾಕಾರದಲ್ಲಿ ಇಡಲು ಕಾರಣವೇನು ಎಂಬುದನ್ನು ತಿಳಿಯೋಣ.
ತಜ್ಞರ ಪ್ರಕಾರ, ಪುಸ್ತಕಗಳ ಉದ್ದ ಮತ್ತು ಅಗಲವು ಒಂದೇ ಅಳತೆಯಲ್ಲಿ ಇದ್ದರೆ ಓದುಗರು ಸುಲಭವಾಗಿ ಓದಬಹುದು.
ಕಾಗದದ ಆವಿಷ್ಕಾರಕ್ಕೂ ಮೊದಲು, ಹುಲ್ಲಿನ ಚಾಪೆಗಳಿಂದ ಮಾಡಿದ ಸುರುಳಿಯಲ್ಲಿ ಬರೆಯಲಾಗುತ್ತಿತ್ತು. ಅವುಗಳು ಕೂಡಾ ಚೌಕಾಕಾರವಾಗಿರುತ್ತವೆ.
ನಿಧಾನವಾಗಿ ಚರ್ಮದಿಂದ ಮಾಡಿದ ಪುಸ್ತಕಗಳು ಬಳಕೆಗೆ ಬಂದವು. ಇವು ಉದ್ದ ಹೆಚ್ಚು ಮತ್ತು ಅಗಲ ಕಡಿಮೆ ಇದ್ದವು.
ಚರ್ಮಕಾಗದ ಮಡಚಿ ಪುಟಗಳನ್ನು ಮಾಡಿದಾಗಲೂ ಅವು ಚೌಕಾಕಾರವಾದವು. ಆ ಕಾಲದಿಂದಲೂ ಜನರು ಚದರ ಆಕಾರದಲ್ಲಿನ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರು ಎಂದು ಹೇಳಲಾಗಿದೆ.
ಚರ್ಮಕಾಗದ ಚೌಕವಾಗಿದ್ದ ಕಾರಣದಿಂದ ಕಾಗದದ ಪುಸ್ತಕಗಳನ್ನು ಅದೇ ಆಕಾರದಲ್ಲಿ ತಯಾರಿಸಲು ಆರಂಭಿಸಲಾಯಿತು.
ಐತಿಹಾಸಿಕ ಹಿನ್ನೆಲೆ ಮತ್ತು ಓದುವ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಪುಸ್ತಕಗಳನ್ನು ಈಗಲೂ ಚೌಕ ಅಥವಾ ಆಯತಾಕಾರದಲ್ಲಿ ಮಾತ್ರ ತಯಾರಿಸಲಾಗುತ್ತದೆ.
ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ