ಲೋಕಸಭೆ ಚುನಾವಣೆಯ ಇತಿಹಾಸದಲ್ಲಿ ಅತಿ ಹೆಚ್ಚು ಸ್ಥಾನಗಳನ್ನ ಪಡೆದ ಪಕ್ಷವಿದು

By Raghavendra M Y
Apr 15, 2024

Hindustan Times
Kannada

2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ 400 ಸೀಟು ಗೆಲ್ಲುವ ಗುರಿ ಹಾಕಿಕೊಂಡಿದೆ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ 1951ರ ಅಕ್ಟೋಬರ್ 25 ಮತ್ತು 1952ರ ಫ್ರೆಬವರಿ 21ರ ನಡುವೆ ಮೊದಲ ಲೋಕಸಭಾ ಚುನಾವಣೆ ನಡೆಯಿತು

ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ 17 ಲೋಕಸಭಾ ಚುನಾವಣೆಗಳು ನಡೆದಿವೆ

1984 ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ 414 ಸ್ಥಾನಗಳ ಗೆಲುವು ಈವರೆಗಿನ ದಾಖಲೆಯಾಗಿದೆ

ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಬಳಿಕ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕಂಪದ ಅಲೆ ವರ್ಕೌಟ್ ಆಗಿ ದಾಖಲೆ ಬರೆದಿತ್ತು

543 ಲೋಕಸಭಾ ಕ್ಷೇತ್ರಗಳ ಪೈಕಿ 541 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. 271 ಮ್ಯಾಜಿಕ್ ಸಂಖ್ಯೆಯಾಗಿತ್ತು. ಅಸ್ಸಾಂ, ಪಂಜಾಬ್‌ನಲ್ಲಿ ಚುನಾವಣೆ ತಡವಾಗಿತ್ತು

1984ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಂತರದ ಸ್ಥಾನವನ್ನು ಎನ್‌ಟಿಆರ್ ನೇತೃತ್ವದ ಅಂದಿನ ಹೊಸ ಪಕ್ಷ ಟಿಡಿಪಿ (30) ಪಡೆದಿತ್ತು

ಆ ಚುನಾವಣೆಯಲ್ಲಿ ಸಿಪಿಐ(ಎಂ) 22 ಹಾಗೂ ಜನತಾ ದಳ 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ