ಲೋಕಸಭೆ ಚುನಾವಣೆ 2024: ಅತಿ ಹೆಚ್ಚು ಓದಿಕೊಂಡಿರುವ ಅಗ್ರ ಅಭ್ಯರ್ಥಿಗಳಿವರು
Odisha Ceo
By Raghavendra M Y
Apr 11, 2024
Hindustan Times
Kannada
ಶಶಿ ತರೂರ್ ರಿಂದ ಉಮೇಶ್ ಜಾಧವ್ ವರೆಗೆ ಉನ್ನತ ಶಿಕ್ಷಣ ಪಡೆದಿರುವ ಅಗ್ರ 10 ಅಭ್ಯರ್ಥಿಗಳ ವಿವರವನ್ನು ನೋಡೋಣ
PTI
1957 ರಲ್ಲಿ ದೆಹಲಿ ವಿವಿಯ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಶಶಿ ತರೂರ್ ಬಿಎ, ಟಫ್ಟ್ಸ್ ವಿವಿಯಿಂದ ಎಂಎ, ಅಂತಾರಾಷ್ಟ್ರೀಯ ಸಂಬಂಧಗಳು ವಿಷಯದಲ್ಲಿ 1978 ರಲ್ಲಿ ಪಿಎಚ್‌ಡಿ ಪಡೆದಿದ್ದಾರೆ
ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಗುಲ್ಬರ್ಗಾ ವಿವಿಯಿಂದ ಎಂಬಿಬಿಎಸ್, ಎಂಡಿ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸರ್ಜರಿ ಪದವಿ ಪಡೆದಿದ್ದಾರೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಎಂಬಿಬಿಎಸ್, ಕಾರ್ಡಿಯಾಲಜಿಯಲ್ಲಿ ಡಿಎಂ ಮಾಡಿದ್ದಾರೆ. ಜನರಲ್ ಮೆಡಿಸನ್ ಎಂಡಿ ಪದವಿಯೂ ಇದೆ.
ಮುಂಬೈನ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯೂಷ್ ಗೋಯಲ್ ಸಿಎ ಮಾಡಿದ್ದಾರೆ. ಮುಂಬೈ ವಿವಿಯಲ್ಲಿ ಬಿಕಾಂ, ಕಾನೂನು ವ್ಯಾಸಂಗ ಪೂರ್ಣಗೊಳಿಸಿದ್ದಾರೆ
ದಿಬ್ರುಗಢ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ಬಾನಂದ ಸೋನೋವಾಲ್ ಬಿಎ, ಎಲ್‌ಎಲ್‌ಬಿ ಹಾಗೂ ಬಿಸಿಜೆ ಪದವಿ ಗಳಿಸಿದ್ದಾರೆ
ಟಿಎಂಸಿ ನಾಯಕಿ, ಕೃಷ್ಣನಗರ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರು 1998ರಲ್ಲಿ ಯುಎಸ್‌ನಲ್ಲಿ ಆರ್ಥಿಕತೆ, ಗಣಿತ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ
ಪಟಿಯಾಲ ಎಎಪಿ ಅಭ್ಯರ್ಥಿ ಡಾ ಬಲ್ಬೀರ್ ಸಿಂಗ್ ಎಂಬಿಬಿಎಸ್ ಪದವಿದರರಾಗಿದ್ದು, ಸಹ ಪ್ರಾಧ್ಯಾಪಕರಾಗಿ ನಿವೃತ್ತಿಯಾಗಿದ್ದಾರೆ. ಸದ್ಯ ಕಣ್ಣಿನ ತಜ್ಞರಾಗಿ ಸೇವೆ ಮಾಡುತ್ತಿದ್ದಾರೆ
ಮಹಾರಾಷ್ಟ್ರದ ನಂದೂರ್‌ಬಾರ್ ಎಸ್‌ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಹೀನಾ ವಿಜಯ್‌ಕುಮಾರ್ ಗವಿತ್ ಎಂಬಿಬಿಎಸ್, ಜನರಲ್ ಮೆಡಿಸನ್‌ನಲ್ಲಿ ಎಂಡಿ, ಎಲ್‌ಎಲ್‌ಬಿ ಪದವೀಧರೆ
FB
ವಿವಾಹಗಳಿಗೆ ಟ್ರೆಂಡ್ ಆಗುತ್ತಿರುವ ಬ್ಲೌಸ್ ಡಿಸೈನ್ ಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ