ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಯಾವಾಗ, ಆಗ ಪ್ರಧಾನಿ ಯಾರು? 

By Raghavendra M Y
Apr 11, 2024

Hindustan Times
Kannada

ಕಾಂಗ್ರೆಸ್‌ನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು 1975 ರಿಂದ 1977 ವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು

ಪ್ರಧಾನಿ ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿಯನ್ನು ರಾಜಕೀಯವಾಗಿ ಅಷ್ಟಾಗಿ ಬಲ ಹೊಂದಿರದ ಜನತಾ ಪಕ್ಷ ವಿರೋಧಿಸಿತ್ತು

ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಬಳಿಕ ಜನತಾ ಪಕ್ಷ ಮುನ್ನೆಲೆಗೆ ಬಂದಿತು

 1977 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಕಾಂಗ್ರೆಸ್ ಅನ್ನು ಸೋಲಿಸಿತು ಇತಿಹಾಸ ನಿರ್ಮಿಸಿತು

ಜನತಾ ಪಕ್ಷದ ನಾಯಕ ಮೊರಾರ್ಜಿ ದೇಸಾಯಿ ಅವರು ಭಾರತದ 4ನೇ ಪ್ರಧಾನಿಯಾಗಿ ಆಯ್ಕೆಯಾದರು

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೊರಾರ್ಜಿ ದೇಸಾಯಿ ಅವರು ಪಾತ್ರರಾದರು

ಜನತಾ ಪಕ್ಷ ನೇತೃತ್ವದ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸರ್ಕಾರ 1977 ರಲ್ಲಿ ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆಯಿತು

ಮೊರಾರ್ಜಿ ದೇಸಾಯಿ ಅವರು ತಮ್ಮ 81ನೇ ವಯಸ್ಸಿನಲ್ಲಿ ಭಾರತದ ಪ್ರಧಾನಿಯಾದರು. ಈ ಹುದ್ದೆಗೇರಿದ ಅತ್ಯಂತ ಹಿರಿಯ ನಾಯಕ ಎನಿಸಿದ್ದಾರೆ

1977 ರ ಲೋಕಸಭೆ ಚುನಾವಣೆಯಲ್ಲಿ 542 ಕ್ಷೇತ್ರಗಳ ಪೈಕಿ ಜನತಾ ಪಕ್ಷ 295 ಸ್ಥಾನ ಗೆದ್ದರೆ, ಕಾಂಗ್ರೆಸ್ 154 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿತ್ತು

ಸಿಎಸ್​​ಕೆ ವಿರುದ್ಧ ವಿರಾಟ್ ಕೊಹ್ಲಿ ಬೊಂಬಾಟ್ ಪ್ರದರ್ಶನ