ಈ 11 ದಾಖಲೆಗಳ ಪೈಕಿ ಯಾವುದಾದರೂ 1 ಇದ್ದರೂ ನೀವು ಮತದಾನ ಮಾಡಬಹುದು
By Raghavendra M Y
Apr 22, 2024
Hindustan Times
Kannada
ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ನೀವು ಮತದಾನ ಮಾಡಬಹುದು
ಮತದಾರರ ಗುರುತಿನ ಚೀಟಿ ಇಲ್ಲದ ನಾಗರಿಕರಿಗೆ ಚುನಾವಣಾ ಆಯೋಗವು ಅನುಕೂಲಕರ ಪರಿಹಾರವನ್ನು ಪರಿಚಯಿಸಿದೆ
ವೋಟರ್ ಐಡಿ ಇಲ್ಲದವರು ಈ ಕೆಳಗಿನ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆಯಲ್ಲಿ ತೋರಿಸಿ ಮತ ಚಲಾಯಿಸಬಹುದು
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯರು ಕಡ್ಡಾಯವಾಗಿ ಮತದಾನ ಮಾಡಬೇಕು. ಈ 11 ರಲ್ಲಿ ಒಂದು ದಾಖಲೆ ಇದ್ರೂ ಸಾಕು
ಫೋಟೊ ಇರುವ ಪಿಂಚಣಿ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪೋಸ್ಟ್ ಆಫೀಸ್ ಪಾಸ್‌ಬುಕ್ ತೋರಿಸಿ ವೋಟ್ ಮಾಡಿ
ಮತದಾರರ ಗುರುತಿನ ಆಧಾರವಾಗಿ ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್, ಕೇಂದ್ರ ಕಾರ್ಮಿಕ ಸಚಿವಾಲದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ ಬಳಸಿ
ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಗುರುತಿನ ಚೀಟಿಗಳನ್ನು ಬಳಸಬಹುದು
ಚಲಾವಣೆಯಲ್ಲಿರುವ ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಬಳಸಿ
ವಿಕಲಚೇತನರಿಗೆ ನೀಡಲಾಗುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ನೀಡುವ ಸ್ಮಾರ್ಟ್ ಕಾರ್ಡ್ ಬಳಸಬಹುದು
ಧಾರ್ಮಿಕ ಮಹತ್ವದ ಸ್ವಸ್ತಿಕ್ ಯಾವ ದೇವರ ಗುರುತು
Pic Credit: Shutterstock
ಮುಂದಿನ ಸ್ಟೋರಿ ಕ್ಲಿಕ್ ಮಾಡಿ