ವಿನಾಯಕನಿಗೆ ಮೊದಲ ಪೂಜೆ ಏಕೆ?

By Rakshitha Sowmya
Apr 25, 2024

Hindustan Times
Kannada

ಯಾವುದೇ ಪೂಜೆ, ಶುಭ ಸಮಾರಂಭ ಆರಂಭಿಸುವ ಮುನ್ನ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ

ಇತರ ಎಲ್ಲಾ ದೇವತೆಗಳಲ್ಲಿ ಗಣಪತಿಗೇ ಏಕೆ ಆ ಸ್ಥಾನ ನೀಡಲಾಗಿದೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ

ದಂತಕಥೆಯ ಪ್ರಕಾರ ಪಾರ್ವತಿಯು ಸ್ನಾನ ಮಾಡುವ ಮುನ್ನ ತನ್ನ ಕೋಣೆಯನ್ನು ಕಾಯವಂತೆ ಗಣಪತಿಗೆ ಸೂಚಿಸುತ್ತಾಳೆ

ಇದನ್ನು ಅರಿಯದ ಶಿವನು, ಒಳಗೆ ಹೋಗಲು ಬಿಡದ ಕಾರಣ ಕೋಪಗೊಂಡು ಗಣೇಶನ ತಲೆಯನ್ನು ಕಡಿಯುತ್ತಾನೆ. ಇದು ಪಾರ್ವತಿಯನ್ನು ಕೆರಳಿಸುತ್ತದೆ

ಪಾರ್ವತಿಯ ನೋವನ್ನು ಅರ್ಥ ಮಾಡಿಕೊಂಡ ಶಿವನು ಗಣೇಶನಿಗೆ ಆನೆಯ ರುಂಡವನ್ನು ತಂದು ಜೋಡಿಸಿ ಮತ್ತೆ ಜೀವ ನೀಡುತ್ತಾನೆ

ನೋವಿನಲ್ಲಿದ್ದ ಪಾರ್ವತಿಯನ್ನು ಸಂತೋಷಪಡಿಸಲು, ಇನ್ಮುಂದೆ ಯಾವುದೇ ಪೂಜೆ ಪುನಸ್ಕಾರ, ಶುಭ ಸಮಾರಂಭಕ್ಕೂ ಮುನ್ನ ಗಣೇಶನಿಗೆ ಮೊದಲ ಪೂಜೆ ಆಗಬೇಕೆಂದು ಶಿವನು ಘೋಷಿಸುತ್ತಾನೆ

ಮತ್ತೊಂದು ಕಥೆಯ ಪ್ರಕಾರ ಶಿವನು ತಮ್ಮ ಮಕ್ಕಳಿಗೆ ಬ್ರಹ್ಮಾಂಡವನ್ನು ಮೂರು ಸುತ್ತು ಸುತ್ತುವಂತೆ ಸ್ಪರ್ಧೆಯನ್ನು ಆಯೋಜಿಸುತ್ತಾರೆ

ಸುಬ್ರಹ್ಮಣ್ಯನು ತನ್ನ ವಾಹನ ನವಿಲನ್ನು ಏರಿ ಬ್ರಹ್ಮಾಂಡ ಸುತ್ತಲು ಹೋದರೆ ಗಣೇಶ ಮಾತ್ರ ತನ್ನ ಹೆತ್ತವರಾದ ಶಿವ ಪಾರ್ವತಿಯರನ್ನೇ ಸುತ್ತುತ್ತಾನೆ

ಇದರಿಂದ ಸಂತೋಷಗೊಂಡ ಶಿವನು, ಇನ್ಮುಂದೆ ಎಲ್ಲರೂ ನಿನಗೆ ಮೊದಲ ಪೂಜೆ ಸಲ್ಲಿಸಬೇಕು ಎಂದು ಹಾರೈಸುತ್ತಾರೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸಹೋದರರ ದಿನದಂದು ಕೊನೆ ಕ್ಷಣದಲ್ಲಿ ಗಿಫ್ಟ್‌ ಕೊಡಲು ಯೋಚಿಸಿದ್ದರೆ ಇಲ್ಲಿದೆ ಐಡಿಯಾ