ಗಂಡು ಮಕ್ಕಳಿಗೆ ಇಡಬಹುದಾದ ಶಿವನ ಹೆಸರುಗಳು
By Rakshitha Sowmya
Jan 26, 2024
Hindustan Times
Kannada
ನಿರಂಜನ: ಶಿವನಿಗೆ ಇರುವ ವಿವಿಧ ಹೆಸರುಗಳಲ್ಲಿ ಇದೂ ಒಂದು. ನಿರಂಜನ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು ನಿರಂಜನ್ ಎಂದರೆ ನಿರ್ಮಲ ಅಥವಾ ಶುದ್ಧ ಎಂದರ್ಥ.
ಪುಷ್ಕರ: ಪೋಷಣೆ ನೀಡುವವನು, ಸಲಹುವವನು ಎಂಬುದು ಈ ಪದದ ಅರ್ಥ.
ಪ್ರಣವ: ಪವಿತ್ರ ಮಂತ್ರ ಓಂ ಎಂಬ ಪದದಿಂದ ಈ ಹೆಸರು ಹುಟ್ಟಿಕೊಂಡಿದೆ
ಲೋಕಪಾಲ: ಜಗತ್ತನ್ನು ನೋಡಿಕೊಳ್ಳುವವನು, ಪಾಲಿಸುವವನು ಎಂಬುದು ಈ ಪದದ ಅರ್ಥ
ಕೌಶಿಕ: ಶಿವನ ವಿವಿಧ ಹೆಸರುಗಳಲ್ಲಿ ಇದೂ ಒಂದು, ಹಾಗೆಂದರೆ ಪ್ರೀತಿ ಮತ್ತು ಪ್ರೀತಿಯ ಭಾವನೆ
ಗೌರಿ ಶಂಕರ: ಗೌರಿಯ ಪತಿಯಾದ ಶಿವನನ್ನು ಗೌರಿ ಶಂಕರ ಎಂಬ ಹೆಸರಿನಿಂದಲೂ ಕರೆಯುತ್ತಾರೆ
ಇಶಾನ್: ಆಡಳಿತಗಾರ ಎಂಬುದು ಈ ಪದದ ಅರ್ಥ, ಮಾಡ್ರನ್ ಹೆಸರಿಡಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆ
ಧ್ಯಾನ ದೀಪ: ಧ್ಯಾನದ ಅಧಿಪತಿ , ಧ್ಯಾನದ ಬೆಳಕು ಎಂಬುದು ಈ ಪದದ ಅರ್ಥ
ಅಶುತೋಷ್: ಭಕ್ತರ ಇಷ್ಟಾರ್ಥಗಳನ್ನು, ಆಸೆಗಳನ್ನು ತಕ್ಷಣವೇ ಈಡೇರಿಸುವವನು ಎಂದರ್ಥ
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ