ಈ ರಾಶಿಯವರಿಗೆ ಸಂಗಾತಿ ಅಂದ್ರೆ ಪಂಚಪ್ರಾಣ

By Rakshitha Sowmya
Apr 02, 2024

Hindustan Times
Kannada

ಜೀವನದಲ್ಲಿ ಎಲ್ಲರಿಗೂ ಒಬ್ಬರ ಮೇಲೆ ಪ್ರೀತಿ ಉಂಟಾಗಿರುತ್ತದೆ. ಆದರೆ ಬಹಳಷ್ಟು ಜನರು ತಮ್ಮ ಸಂಗಾತಿಯನ್ನು ಅತಿಯಾಗಿ ಇಷ್ಟಪಡುತ್ತಾರೆ. 

ದ್ವಾದಶ ರಾಶಿಗಳಲ್ಲಿ ಕೊನೆಯ ಚಿಹ್ನೆಯಾದ ಮೀನ ರಾಶಿಯವರು ಬಹಳ ರೊಮ್ಯಾಂಟಿಕ್‌ ವ್ಯಕ್ತಿತ್ವದವರು. ಇವರು ಭಾವನಾತ್ಮಕ ಹಾಗೂ ನಿಸ್ವಾರ್ಥ ಪ್ರೀತಿಗೆ ಹೆಸರಾಗಿದ್ದಾರೆ. ತಮ್ಮ ಪ್ರೀತಿಯನ್ನು ದಯೆ, ಕಾವ್ಯಾತ್ಮಕ , ಭಾವಪೂರ್ಣ ಸಂಭಾಷಣೆಗಳ ಮೂಲಕ ವ್ಯಕ್ತಪಡಿಸುತ್ತಾರೆ. 

ವೃಶ್ಚಿಕ ರಾಶಿಯವರು ನಿಗೂಢ ಸ್ವಭಾವಕ್ಕೆ ಹೆಸರುವಾಸಿಯಾದವರು. ಪ್ರೀತಿಯ ವಿಚಾರಕ್ಕೆ ಬಂದಾಗ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಹಿಂಜರೆದರೂ ಒಮ್ಮೆ ಪ್ರೀತಿ ದೊರೆತರೆ ಸಂಗಾತಿಯನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. 

ಸಿಂಹ ರಾಶಿಯವರು ರೊಮ್ಯಾಂಟಿಕ್‌ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ಬಹಳ ನಿಪುಣರು. ಪ್ರೇಮಿಯು ಸದಾ ತಮ್ಮೊಂದಿಗೆ ಇರಬೇಕೆಂದು ಬಯಸುವಂತೆ ತಮ್ಮ ಗುಣಗಳಿಂದಲೇ ಆಕರ್ಷಿಸುತ್ತಾರೆ. 

ಕರ್ಕಾಟಕ ರಾಶಿಯವರು ಪ್ರೀತಿಯ ವಿಚಾರಕ್ಕೆ ಬಂದಾಗ ತಮ್ಮ ಸಂಗಾತಿಯನ್ನು ಬಹಳ ಆಳವಾಗಿ ಪ್ರೀತಿಸುತ್ತಾರೆ. ತಮ್ಮ ಸಂಗಾತಿಗೆ ಬಹಳ ಭದ್ರತೆಯ ಭಾವವನ್ನು ನೀಡುತ್ತಾರೆ. 

ವೃಷಭ ರಾಶಿಯವರು ಪ್ರೀತಿಯಲ್ಲಿ ಬಹಳ ನಿಷ್ಠಾವಂತರಾಗಿರುತ್ತಾರೆ. ತಮ್ಮ ಸಂಗಾತಿಯನ್ನು ಮನಸ್ಸಿನ ಆಳಕ್ಕೆ ಇಳಿದು ಪ್ರೀತಿಸುತ್ತಾರೆ. 

ಶಾರೂಖ್ ಟು ಪ್ರೀತಿ; ಕ್ರೀಡಾ ತಂಡಗಳನ್ನು ಹೊಂದಿರುವ ಬಾಲಿವುಡ್ ನಟರು