ಮಾಘ ಪೂರ್ಣಿಮೆ 2024: ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿಗಾಗಿ ಹೀಗೆ ಮಾಡಿ

By Umesh Kumar S
Nov 26, 2024

Hindustan Times
Kannada

ಹಿಂದೂ ಧರ್ಮದಲ್ಲಿ ಮಾಘ ಪೂರ್ಣಿಮೆ, ಮಾಘಿ ಹುಣ್ಣಿಮೆಗೆ ವಿಶೇಷ ಮಹತ್ವ.  ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ.

ಮಾಘ ಪೂರ್ಣಿಮೆಯ ದಿನ ಪುಣ್ಯ ಸ್ನಾನ, ದಾನ ಮಾಡಿದರೆ ಶುಭಫಲ. ಚಂದ್ರ ದೇವನ ಜತೆಗೆ ಲಕ್ಷ್ಮೀ ಪೂಜೆ ಮಂಗಳಕರ.

ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನ ದಾನ, ದಕ್ಷಿಣೆಗೆ ವಿಶೇಷ ಮಹತ್ವ. ಈ ದಿನ ದಾನ ಮಾಡಿದರೆ 32 ಪಟ್ಟು ಪ್ರತಿಫಲ ಸಿಗುತ್ತದೆ.

ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿ ಹೆಚ್ಚಬೇಕಾದರೆ ಮಾಘ ಹುಣ್ಣಿಮೆಯಂದು ಮಾಡಬಹುದಾದ ವಿಶೇಷ ಕ್ರಮಗಳಿವು

ಗಂಗಾ ಸ್ನಾನದಿಂದ ಶ್ರೀಹರಿಯ ವಿಶೇಷ ಅನುಗ್ರಹ ಪ್ರಾಪ್ತಿ. ಮಹಾವಿಷ್ಣುವು ಗಂಗಾ ಜಲದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ.

ಮಾಘ ಪೂರ್ಣಿಮೆಯಂದು ವಿಷ್ಣುವಿನ ಜತೆಗೆ ಲಕ್ಷ್ಮೀದೇವಿಯನ್ನು ಪೂಜಿಸಬೇಕು. ಹಳದಿ, ಕೆಂಪು ಬಣ್ಣದ ವಸ್ತು ಸಮರ್ಪಿಸಿದರೆ ದೇವರಿಗೆ ಸಂತೃಪ್ತಿ.

ನದಿಯ ದಡದಲ್ಲಿ ದೀಪಗಳನ್ನು ದಾನ ಮಾಡುವುದು ಪುಣ್ಯ ಕಾರ್ಯ. ದೇವತೆಗಳು ಸಂತುಷ್ಟರಾಗುತ್ತಾರೆ 

ಮಾಘಿ ಪೂರ್ಣಿಮೆಯಂದು 11 ಗೋವುಗಳಿಗೆ ಅರಿಶಿನ ಬಣ್ಣ ಹಚ್ಚಿ ಲಕ್ಷ್ಮಿ ದೇವಿಗೆ ಅರ್ಪಿಸಿದರೆ ಆರ್ಥಿಕ ಮುಗ್ಗಟ್ಟು ನಿವಾರಣೆ

ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP