ಮಹಾಶಿವರಾತ್ರಿಯಂದು ಈ ಕೆಲಸ ಮಾಡಿದರೆ ಎಲ್ಲಾ ಅಡೆತಡೆಗಳೂ ದೂರಾಗುತ್ತವೆ

By Rakshitha Sowmya
Mar 08, 2024

Hindustan Times
Kannada

ಮಹಾಶಿವರಾತ್ರಿಯಂದು ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷವಾಗಿ ಶಿವಾಲಯಗಳಲ್ಲಿ ಭಕ್ತರ ದಂಡೇ ನೆರೆದಿರುತ್ತದೆ

ಶಿವರಾತ್ರಿಯ ಈ ವಿಶೇಷ ದಿನ ಈ ಕೆಲಸಗಳನ್ನು ಮಾಡಿದರೆ ಶಿವನ ಅನುಗ್ರಹ ದೊರೆಯಲಿದೆ

ಶಿವರಾತ್ರಿಯ ದಿನ ಮನೆಯಲ್ಲಿ ಹುತ್ತದ ಮಣ್ಣಿನಿಂದ ಮಾಡಿದ ಶಿವಲಿಂಗವನ್ನು ಪ್ರತಿಷ್ಠಾಪಿಸಿ. ಆ ಶಿವಲಿಂಗವು ನಿಮ್ಮ ಹೆಬ್ಬೆರಳಿಗಿಂತ ಚಿಕ್ಕದಾಗಿರಬೇಕು

ಶಿವಲಿಂಗವನ್ನು ಪ್ರತಿಷ್ಠಾಪಿಸಿದ ನಂತರ ಪ್ರತಿ ಗಂಟೆಗೊಮ್ಮೆ ಅದಕ್ಕೆ ಪೂಜೆ ಮಾಡಿ

ಶಿವರಾತ್ರಿಯಂದು ಬಡ ಅವಿವಾಹಿತ ಯುವತಿಯರಿಗೆ ಮದುವೆಗೆ ಬೇಕಾದ ಸಾಮಗ್ರಿಗಳನ್ನು ದಾನ ಮಾಡಿ

ಶಿವಾಲಯಕ್ಕೆ ಹೋಗಿ 11 ದೀಪಗಳನ್ನು ಹಚ್ಚಿ ಓಂ ನಮಃ ಶಿವಾಯ ಮಂತ್ರವನ್ನು ಪಠಣೆ ಮಾಡಿ

ಶಿವಲಿಂಗಕ್ಕೆ ಶಮಿಪತ್ರೆ ಅಥವಾ ಬಿಲ್ವಪತ್ರೆಯಿಂದ ಅಷ್ಟೋತ್ತರ ಮಾಡಿದರೆ ನಿಮ್ಮ ಸಂಕಷ್ಟಗಳು ನಿವಾರಣೆ ಆಗಲಿವೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಭಾರತದ ಅತೀ ಶ್ರೀಮಂತ ಶಾಸಕರು ಇವರು

Source: ADLR Delhi