ನಾಗಾಸಾಧುಗಳ ಬಗ್ಗೆ ಆಸಕ್ತಿಕರ ವಿಚಾರಗಳು

By Rakshitha Sowmya
Jan 20, 2025

Hindustan Times
Kannada

ನಾಗಾಸಾಧುಗಳನ್ನು ಆಧ್ಯಾತ್ಮಿಕ ಸಂರಕ್ಷಕರು ಎಂದು ಪರಿಗಣಿಸಲಾಗಿದೆ,  ಇವರು ಹಿಂದೂ ಧರ್ಮದ ಪವಿತ್ರ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವವರು

ಪವಿತ್ರ ಸ್ನಾನವನ್ನು ಶಿವನ ಶಿಷ್ಯರು ಎಂದು ಕರೆಯಲ್ಪಡುವ ನಾಗಾಸಾಧುಗಳು ಮೊದಲು ಮಾಡುತ್ತಾರೆ

ಈ ಪದ್ಧತಿಯು ಇಂದು, ನಿನ್ನೆಯದಲ್ಲ ಯುಗಗಳಿಂದಲೂ ನಡೆದುಕೊಂಡು ಬಂದಿದೆ

ಅಮೃತ ಸ್ನಾನ ಮಾಡುವ ಮೊದಲ ಅವಕಾಶ ನಾಗಾಸಾಧುಗಳಿಗೆ ದೊರೆತಿರುವುದು ಅವರ ಧಾರ್ಮಿಕ ಮಹತ್ವವನ್ನು ಸಾರಿ ಹೇಳುತ್ತದೆ, ಇದು ಅವರಿಗೆ ಸಂದ ಗೌರವ

ನಾಗಾಸಾಧುಗಳು ಸಾರ್ವಜನಿಕವಾಗಿ ಕೂಡಾ ನಗ್ನರಾಗಿ ಕಾಣಿಸಿಕೊಳ್ಳುತ್ತಾರೆ,ಇದು ಅವರ ಗುರುತಾಗಿದೆ

ನಾಗಾಸಾಧು ಆಗುವುದು ಸುಲಭದ ಮಾತಲ್ಲ, ಇದು ಬಹಳ ಕಠಿಣವಾದ ದಾರಿ, ಅದಕ್ಕಾಗಿ ಎಷ್ಟೋ ವರ್ಷಗಳ ಶ್ರಮ ಬೇಕು

ತಮ್ಮ ದೇಹವನ್ನು ತೊರೆಯಲು ಬಯಸಿದಾಗ ಅವರು ಕುಳಿತು ಧ್ಯಾನ ಮಾಡುವ ಭಂಗಿಯನ್ನು ಅನುಸರಿಸುತ್ತಾರೆ

ಸಾವಿನ ನಂತರವೂ ಅವರ ತಲೆಯನ್ನು ಸಂರಕ್ಷಿಸಿ ಆಧ್ಯಾತ್ಮಿಕ ಅಭ್ಯಾಸಗಳಿಗೆ ಬಳಸಿಕೊಳ್ಳಲಾಗುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು

Pinterest