ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಕುರಿತು 9 ಆಸಕ್ತಿಕರ ಸಂಗತಿಗಳು
By Reshma Jan 14, 2025
Hindustan Times Kannada
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ. ಈ ದೇವಾಲಯವು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ 18 ಬೆಟ್ಟಗಳಿಂದ ಆವೃತವಾಗಿದೆ. ಅಯ್ಯಪ್ಪ ಸ್ವಾಮಿಯನ್ನು ಮೋಹಿನಿಯ ರೂಪದಲ್ಲಿದ್ದ ವಿಷ್ಣು ಹಾಗೂ ಶಿವನ ಮಗ ಎಂದು ಹೇಳಲಾಗುತ್ತದೆ
ಈ ದೇಗುಲದಲ್ಲಿ 1500 ವರ್ಷಗಳಿಂದ ಬ್ರಹ್ಮಚರ್ಯದ ನಿಯಮಗಳನ್ನು ಪಾಲಿಸಲಾಗುತ್ತಿದೆ . ಇಲ್ಲಿಗೆ 10 ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ
ಮಹಿಷಾಸುರನ ಸಹೋದರಿ, ಎಮ್ಮೆಯ ತಲೆ ಹೊಂದಿರುವ ಮಹಿಷಿಯನ್ನು ಅಯ್ಯಪ್ಪ ಇದೇ ಸ್ಥಳದಲ್ಲಿ ಕೊಂದಿದ್ದನ್ನು ಎಂಬ ಪ್ರತೀತಿ ಇದೆ
ಶಬರಿಮಲೆಯ 18 ಮೆಟ್ಟಿಲುಗಳಲ್ಲಿ 5 ಮೆಟ್ಟಿಲು ಇಂದ್ರಿಯಗಳನ್ನು, ಮುಂದಿನ 8 ಮೆಟ್ಟಿಲು ಕೆಟ್ಟ ಗುಣಗಳನ್ನು, ಮುಂದಿನ 3 ಮೆಟ್ಟಿಲು ಮೂರು ಗುಣಗಳನ್ನು, ಕೊನೆ ಎರಡು ಮೆಟ್ಟಿಲು ಜ್ಞಾನ ಮತ್ತು ಅಜ್ಞಾನವನ್ನು ಸಂಕೇತಿಸುತ್ತದೆ. ಇದು ಪ್ರಾಪಂಚಿಕ ಆಸೆಗಳಿಂದ ದೂರಾಗಬೇಕು ಎಂಬುದನ್ನು ಸೂಚಿಸುತ್ತದೆ
ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಮುನ್ನ ವಾವರ ಮಸೀದಿ ಎಂಬ ಸೂಫಿ ದೇಗುಲಕ್ಕೆ ಭೇಟಿ ಕೊಡಬೇಕು. ಇದು ಮುಸ್ಲಿಂ ಸಂತ ವಾವರ ಮತ್ತು ಅಯ್ಯಪ್ಪ ದೇವರ ನಡುವಿನ ಸ್ನೇಹವನ್ನು ಸಂಕೇತಿಸುತ್ತದೆ
ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವವರು 41 ದಿನಗಳ ಕಠಿಣ ವ್ರತದ ಜೊತೆಗೆ ಕೂದಲು, ಉಗುರು ಕತ್ತರಿಸುವಂತಿಲ್ಲ. ಬ್ರಹ್ಮಚರ್ಯವನ್ನು ಪಾಲಿಸಬೇಕು. ಸಸ್ಯಾಹಾರವನ್ನು ಮಾತ್ರ ಸೇವಿಸಬೇಕು. ಈ ಸಮಯದಲ್ಲಿ ನೀಲಿ, ಕಪ್ಪು ಉಡುಪನ್ನು ಹಾಕಬೇಕು
PC: @indiadivine/ Twitter
ಅರವಣ ಪಾಯಸ ಮತ್ತು ಉನ್ನಿಯಪ್ಪಂ ಶಬರಿಮಲೆಯಲ್ಲಿ ಭಕ್ತರಿಗೆ ನೀಡುವ ವಿಶೇಷ ಪ್ರಸಾದವಾಗಿದೆ
PC: @KeralaTourism/ Twitter
41 ದಿನಗಳ ಉಪವಾಸ ಆಚರಿಸುವ ಭಕ್ತರು ಕಪ್ಪು ಅಂಗಿ, ಮುಂಡು ಧೋತಿ ಧರಿಸಬೇಕು. ಬರಿಗಾಲಲ್ಲಿ ನಡೆಯಬೇಕು. ಪವಿತ್ರ ಮಾಲೆ ಧರಿಸಬೇಕು. ಮಾಲೆ ಹಾಕಿದವರನ್ನು ಸ್ವಾಮಿ ಎಂದು ಕರೆಯಲಾಗುತ್ತದೆ.
PC: @sureshvarmaz/ Twitter
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆದ ಅನುಮಾನವಿದೆಯೇ? ಈ ಕೆಲಸ ತಕ್ಷಣ ಮಾಡಿ