ಖರ್ಜೂರದ ಐಸ್ ಕ್ರೀಂ ಒಂದು ರುಚಿಕರ ಮತ್ತು ಆರೋಗ್ಯಕರ ಆಯ್ಕೆಯಾಗಿದೆ. ಇದನ್ನು ಮನೆಯಲ್ಲಿಯೇ ತಯಾರಿಸುವುದು ತುಂಬಾ ಸುಲಭ.
Adobe Stock
ಬೇಕಾಗುವ ಪದಾರ್ಥಗಳು
ಖರ್ಜೂರ, ಹಾಲು ಅಥವಾ ತೆಂಗಿನಹಾಲು, ಕೆನೆ, ಸಕ್ಕರೆ (ಅಗತ್ಯವಿದ್ದರೆ, ಸಿಹಿ ಬೇಕು ಅಂತಿದ್ದರೆ ಬಳಸಬಹುದು) ಮತ್ತು ವೆನಿಲ್ಲಾ ಎಸೆನ್ಸ್.
ಖರ್ಜೂರ ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ಸಕ್ಕರೆಯ ಅಗತ್ಯ ಸ್ವಲ್ಪ ಕಡಿಮೆ. ಹೀಗಾಗಿ ಖರ್ಜೂರದ ಐಸ್ ಕ್ರೀಂ ತಯಾರಿಸುವುದು ಒಂದು ಆರೋಗ್ಯಕರ ಆಯ್ಕೆಯಾಗಿದೆ.
ಖರ್ಜೂರವನ್ನು ತೊಳೆದು, ಬೀಜಗಳನ್ನು ತೆಗೆದು ಒಂದೆರಡು ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿಡಿ. ಇದರಿಂದ ಖರ್ಜೂರ ಮೃದುವಾಗುತ್ತದೆ.
ತಯಾರಿಸುವ ವಿಧಾನ
ನೆನೆಸಿದ ಖರ್ಜೂರವನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪ ಹಾಲು ಮತ್ತು ಕೆನೆ ಮಿಶ್ರಣ ಮಾಡಿ.
ಒಣಹಣ್ಣು ಅಥವಾ ಬೀಜಗಳು, ಚಾಕೋಲೇಟ್ ಚಿಪ್ಸ್ ಅಥವಾ ಯಾವುದಾದರೂ ಹಣ್ಣಿನ ರಸವನ್ನು ಸೇರಿಸಬಹುದು. ಇದು ಐಸ್ ಕ್ರೀಂ ಗೆ ಮತ್ತಷ್ಟು ರುಚಿ ತರುತ್ತದೆ. ನಂತರ ಈ ಮಿಶ್ರಣವನ್ನು ಕೆಲವು ಗಂಟೆಗಳ ಕಾಲ ಫ್ರೀಜ್ ಮಾಡಿ.
ಸಕ್ಕರೆಯ ಬದಲಿಗೆ ಖರ್ಜೂರವನ್ನು ಬಳಸುವುದರಿಂದ ರುಚಿ ತುಂಬಾ ಚೆನ್ನಾಗಿರುತ್ತದೆ.
Adobe Stcock
ಸುಮಾರು 8 ಗಂಟೆಗಳ ಕಾಲ ಫ್ರಿಜ್‌ನಲ್ಲಿಟ್ಟ ಐಸ್ ಕ್ರೀಂ ಅನ್ನು ಹೊರತೆಗೆದು ಖರ್ಜೂರ, ಚಾಕೋಲೇಟ್ ಸಿರಪ್‍ನಿಂದ ಅಲಂಕರಿಸಿ, ಐಸ್ ಕ್ರೀಂ ಸವಿಯಿರಿ.
Adobe Stcock
IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ