ಕಣ್ಮರೆಯಾಗುತ್ತಿರುವ ಭಾರತದ 5 ಅಪರೂಪದ  ಮಾವಿನ ತಳಿಗಳು

Photo Credit: File Photo

By Reshma
May 12, 2025

Hindustan Times
Kannada

ಇದು ಮಾವಿನ ಹಣ್ಣಿನ ಸೀಸನ್‌. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಕಾಣಲು ಸಿಗುತ್ತವೆ

Photo Credit: File Photo

ಮಲ್ಲಿಕಾ, ತೋತಾಪುರಿ, ಬೈಗಂಪಲ್ಲಿ, ಆಲ್ಫೋನ್ಸೋ, ಕೇಸರ್‌ ಹೀಗೆ ಸಾಕಷ್ಟು ಬಗೆಯ ಮಾವಿನಹಣ್ಣುಗಳ ರುಚಿಯನ್ನು ನೀವು ಸವಿದಿರಬಹುದು 

Photo Credit: Pexels

ಆದರೆ ಭಾರತದ ಈ ಅಪರೂಪದ ಮಾವಿನ ತಳಿಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ. ಇವುಗಳ ರುಚಿಯನ್ನು ಬಹುಶಃ ನೀವು ನೋಡಿರುವುದು ಕಷ್ಟ

Photo Credit: File Photo

ಕಣ್ಮರೆಯಾಗುತ್ತಿರುವ ಭಾರತದ 5 ಅಪರೂಪದ ಮಾವಿನ ತಳಿಗಳ ಬಗ್ಗೆ ಇಲ್ಲಿದೆ ಮಾಹಿತಿ 

Photo Credit: File Photo

ಕರುಪ್ಪತ್ತಿ ಕಾಯಿ: ತಮಿಳುನಾಡು ಮೂಲದ ಈ ಮಾವಿನ ಹಣ್ಣು ತಾಳೆ ಬೆಲ್ಲದ ರುಚಿಯನ್ನು ಹೊಂದಿರುತ್ತದೆ. ಇದರಿಂದ ಉಪ್ಪಿನಕಾಯಿ ಹಾಗೂ ಸ್ಥಳೀಯ ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಈ ಮಾವಿನ ಹಣ್ಣು ಕಾಣ ಸಿಗುತ್ತಿಲ್ಲ (ಸಾಂಕೇತಿಕ ಚಿತ್ರ)

Photo Credit: File Photo

ಕನ್ನಿಮಂಗ: ಕೇರಳ ಮೂಲದ ಮಾವಿನ ಪ್ರಬೇಧವಿದು. ಸಾಂಪ್ರದಾಯಿಕ ಪಾಕಪದ್ಧತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ ಈ ಮಾವು. ಇದನ್ನು ಉಪ್ಪಿನಕಾಯಿ ಮಾಡಲು ಕೂಡ ಬಳಸುತ್ತಿದ್ದರು (ಸಾಂಕೇತಿಕ ಚಿತ್ರ)

Photo Credit: File Photo

ಕಲ್ಭಾವಿ ಮಾವು: ಇದು ನಮ್ಮ ಕರ್ನಾಟದ ತಳಿ. ಕರಾವಳಿ ಭಾಗದಲ್ಲಿ ಹುಟ್ಟಿಕೊಂಡು ಈ ಮಾವಿನ ತಳಿ ಅತ್ಯಂತ ಪರಿಮಳ ಹಾಗೂ ರಸಭರಿತ ತಿರುಳಿಗೆ ಹೆಸರುವಾಸಿಯಾಗಿದೆ. ಇದು ಮಧ್ಯಮ ಗಾತ್ರದ ಮಾವಿನ ಹಣ್ಣು (ಸಾಂಕೇತಿಕ ಚಿತ್ರ)

Photo Credit: File Photo

ಬಟಾಶಾ: ಪಶ್ಚಿಮ ಬಂಗಾಳದ ಮೂಲದ ಈ  ಮಾವಿನ ಹಣ್ಣಿಗೆ ಅದರ ಅಸಾಧಾರಣ ಸಿಹಿ ರುಚಿಯಿಂದಾಗಿ ಸಾಂಪ್ರದಾಯಿಕ ಸಕ್ಕರೆ ಮಿಠಾಯಿಗಳ ಹೆಸರನ್ನು ಇಡಲಾಗಿತ್ತು, ಆದರೆ ಈ ಮಾವಿನ ತಳಿ ಇತ್ತೀಚೆಗೆ ಮರೆಯಾಗಿದೆ   (ಸಾಂಕೇತಿಕ ಚಿತ್ರ)

Photo Credit: File Photo

ಅಮ್ಮ ಚೆಟ್ಟು: ಇದು ಆಂಧ್ರಪ್ರದೇಶ ಮೂಲಕ ಮಾವಿನ ತಳಿ. ಗಾತ್ರದಲ್ಲಿ ದೊಡ್ಡದಾಗಿದ್ದು, ನಾರಿನ ತಿರುಳನ್ನು ಹೊಂದಿರುವ ಈ ಮಾವಿನ ಹಣ್ಣು ಅದ್ಭುತ ರುಚಿಯನ್ನು ಹೊಂದಿರುತ್ತದೆ.  (ಸಾಂಕೇತಿಕ ಚಿತ್ರ)

Photo Credit: File Photo

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS